ಅರ್ಜಿ ನಮೂನೆಗಳು |
(ಎಲ್ಲಾ ಪಾಸ್‌ಪೋಟ್ ಕಛೇರಿಗಳಿಗೆ ಅನ್ವಯಿಸುತ್ತದೆ)
|
ಅಂತರ್ಜಾಲದಿಂದ ತೆಗೆದುಕೊಂಡ ನಮೂನೆಗಳನ್ನು ಎಲ್ಲಾ ಪಾಸ್‌ಪೋರ್ಟ್ ಕಾರ್ಯಾಲಯ, ಜಿಲ್ಲಾ ಪಾಸ್‌ಪೋರ್ಟ್ ಕೇಂದ್ರ ಮತ್ತು ಸ್ಪೀಡ್ ಪೋಸ್ಟ್ ಕೇಂದ್ರಗಳಲ್ಲಿ ಬಳಸಬಹುದು.
|
|
ನಮೂನೆ-1: ಹೊಸ ಪಾಸ್‌ಪೋರ್ಟ್/ಮರು ನೀಡಿಕೆ/ಕಳೆದು ಹೋದ/ ಹಾನಿಗೊಳಗಾದ/ನೇರ ತತ್ಕಾಲ್/ಹೆಚ್ಚುವರಿ ಪುಸ್ತಿಕೆಗಾಗಿ. ಅರ್ಜಿ ನಮೂನೆ-೧ ಅನ್ನು ಅಪ್ರಾಪ್ತ/ಮಕ್ಕಳ ಪಾಸ್‌ಪೋರ್ಟ್‌ಗಾಗಿಯೂ ಬಳಸಬಹುದು.
|
| ಹೊಸ ಪಾಸ್‌ಪೋರ್ಟ್: ಹೊಸ ಪಾಸ್‌ಪೋರ್ಟ್ ಅಂದರೆ - ಪ್ರಥಮ ಬಾರಿಗೆ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುತ್ತಿದ್ದಲ್ಲಿ ಅಥವಾ ನಿಮ್ಮ ಬಳಿ ಹಿಂದೆಂದೂ ಪಾಸ್‌ಪೋರ್ಟ್ ಇಲ್ಲದಿದ್ದಲ್ಲಿ. ಅರ್ಜಿದಾರರು ಮೊದಲು ಪಾಸ್‌ಪೋರ್ಟ್‌ಗೆಂದು ಪಾಸ್‌ಪೋರ್ಟ್ ಕಛೇರಿಯಲ್ಲಿ ಅರ್ಜಿ ಸಲ್ಲಿಸಿದ್ದು, ಕಾರಣಾಂತರಗಳಿಂದ ಪಾಸ್‌ಪೋರ್ಟ್ ದೊರೆತಿಲ್ಲದ ಪಕ್ಷದಲ್ಲಿ, ಅರ್ಜಿದಾರರು ತಮ್ಮ ಹಳೇ ಅರ್ಜಿಯ ಮಾಹಿತಿಯನ್ನು ಸರಿಯಾದ ಕಾಲಂನಲ್ಲಿ ನೀಡಬೇಕು. ಅರ್ಜಿದಾರರು ಈ ಮಾಹಿತಿಯನ್ನು ನೀಡದೇ ಹೋದಲ್ಲಿ ದಂಡ ತೆರಬೇಕಾಗಬಹುದು. |
ಪುನರ್‌ನೀಡಿಕೆ: ಅಂದರೆ ಈಗಾಗಲೇ ಇರುವ ಪಾಸ್‌ಪೋರ್ಟ್‌ನ ಅವಧಿ ಮುಗಿಯುತ್ತಿದ್ದಲ್ಲಿ ಅಥವಾ ಮುಗಿದಿದ್ದಲ್ಲಿ ಅರ್ಜಿದಾರರು ನಮೂನೆ-೧ ಅನ್ನು ತುಂಬಬೇಕು. ಅರ್ಜಿದಾರರು ತಮ್ಮ ಪಾಸ್‌ಪೋರ್ಟ್ ಅವಧಿ ಮುಗಿಯುವ ಒಂದು ವರ್ಷ ಮುಂಚೆ ಅಥವಾ ಅವಧಿ ಮುಗಿದುಹೋದ ನಂತರ ೩ ವರ್ಷದ ಒಳಗಾಗಿ ಪುನರ್ ನೀಡಿಕೆಗೆ ಅರ್ಜಿ ಸಲ್ಲಿಸಬಹುದು. ಪುನರ್ ನೀಡಿಕೆ ಮತ್ತು ನವೀಕರಣದ ವ್ಯತ್ಯಾಸವನ್ನು ದಯವಿಟ್ಟು ಗಮನಿಸಿ. ನವೀಕರಣವು ಮೊದಲು ಪಾಸ್‌ಪೋರ್ಟ್ ಅನ್ನು ತುರ್ತು ಅಗತ್ಯಗಳಿಗಾಗಿ ಒಂದರಿಂದ ಐದು ವರ್ಷದ ಅವಧಿಗೆ ಪಡೆದಿದ್ದು, ಅರ್ಜಿದಾರರು ಅದರ ಅವಧಿಯನ್ನು ವಿಸ್ತರಿಸಲು ಕೋರಿದಾಗ ಕೊಡುವಂತದು. ನವೀಕರಣ ಯಾವುದೇ ಶುಲ್ಕವನ್ನು ಒಳಗೊಂಡಿರುವುದಿಲ್ಲ. ನವೀಕರಣಕ್ಕಾಗಿ ನಮೂನೆ-೨ ಅನ್ನು ಬಳಸಬೇಕು. ಕಳೆದು ಹೋದ/ಹಾನಿಗೊಳಗಾದ ಪಾಸ್‌ಪೋರ್ಟ್‌ಗೆ ಬದಲಾಗಿ ಹೊಸ ಪಾಸ್‌ಪೋರ್ಟ್ ಅನ್ನು ನೀಡಲಾಗುತ್ತದೆ.
|
|
ಅರ್ಜಿ ನಮೂನೆ-2: ಪೋಲೀಸ್ ಪ್ರಮಾಣಪತ್ರ ಇ.ಸಿ.ಆರ್ ರದ್ದುಗೊಳಿಸಲು, ಪತಿ/ಪತ್ನಿ ಹೆಸರು ಸೇರ್ಪಡೆಗೆ, ವಿಳಾಸ ಬದಲಾವಣೆಗೆ ಉಪಯೋಗಿಸಬೇಕು. ಈ ಅರ್ಜಿ ನಮೂನೆಯನ್ನು ಕಡಿಮೆ ಅವಧಿಯ ಪಾಸ್‌ಪೋರ್ಟ್‌ನ ಪೂರ್ತಿ ಅವಧಿ ವಿಸ್ತರಣೆಗೆ ಬಳಸಬಹುದು.
|
ಹೊಸ ಪಾಸ್‌ಪೋರ್ಟ್: ಹೊಸ ಪಾಸ್‌ಪೋರ್ಟ್ ಅಂದರೆ - ಪ್ರಥಮ ಬಾರಿಗೆ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುತ್ತಿದ್ದಲ್ಲಿ ಅಥವಾ ನಿಮ್ಮ ಬಳಿ ಹಿಂದೆಂದೂ ಪಾಸ್‌ಪೋರ್ಟ್ ಇಲ್ಲದಿದ್ದಲ್ಲಿ. ಅರ್ಜಿದಾರರು ಮೊದಲು ಪಾಸ್‌ಪೋರ್ಟ್‌ಗೆಂದು ಪಾಸ್‌ಪೋರ್ಟ್ ಕಛೇರಿಯಲ್ಲಿ ಅರ್ಜಿ ಸಲ್ಲಿಸಿದ್ದು, ಕಾರಣಾಂತರಗಳಿಂದ ಪಾಸ್‌ಪೋರ್ಟ್ ದೊರೆತಿಲ್ಲದ ಪಕ್ಷದಲ್ಲಿ, ಅರ್ಜಿದಾರರು ತಮ್ಮ ಹಳೇ ಅರ್ಜಿಯ ಮಾಹಿತಿಯನ್ನು ಸರಿಯಾದ ಕಾಲಂನಲ್ಲಿ ನೀಡಬೇಕು. ಅರ್ಜಿದಾರರು ಈ ಮಾಹಿತಿಯನ್ನು ನೀಡದೇ ಹೋದಲ್ಲಿ ದಂಡ ತೆರಬೇಕಾಗಬಹುದು.
|
|
ವೈಯುಕ್ತಿಕ ವಿವರಣೆ ನಮೂನೆಯನ್ನು ಪೋಲೀಸ್ ತನಿಖಾ ವರದಿಗೆ ಬಳಸಲಾಗಿತ್ತದೆ. ಇದು ಅರ್ಜಿ ನಮೂನೆ-೧ರ ಭಾಗ. ವೈಯುಕ್ತಿಕ ವಿವರಣೆ ನಮೂನೆಯನ್ನು ಪ್ರತ್ಯೇಕವಾಗಿ ಪೋಲೀಸ್ ತನಿಖಾ ವರದಿ ಬೇಕಾದಲ್ಲಿ ತುಂಬಬೇಕಾಗಬಹುದು. (ಪುನರ್ ತನಿಖಾ ವರದಿಂii ಅಗತ್ಯತೆಯ ಬಗ್ಗೆ ಪಾಸ್‌ಪೋರ್ಟ್ ಕಛೇರಿಯ ಅಧಿಕಾರಿಗಳನ್ನು ಕೇಳಿ)
|
| ಅರ್ಜಿ ನಮೂನೆಗಳನ್ನು ಕೆಳಗಿನ ಅಂತರ್ಜಾಲ ವಿಳಾಸದಿಂದ ಪಡೆಯಿರಿ. |
|