ಹೋಂ ಪೇಜ್ ಸಂಪರ್ಕಿಸಿ ನಮ್ಮಬಗ್ಗೆ ಫೋಟೋ ಗ್ಯಾಲರಿ ಸೈಟ್ ನಕ್ಷೆ
 

 ಅರ್ಜಿ ನಮೂನೆಗಳು

 ಫಾರಂ ತುಂಬುವ ವಿಧಾನಗಳು

 ಪ್ರಮಾಣಪತ್ರಗಳು

 ಶುಲ್ಕ ವಿವರ

 ಅರ್ಜಿ ಸಲ್ಲಿಸುವ ವಿಧಾನ

 ತತ್ಕಾಲ್ ಸೇವೆ ಮಾಹಿತಿ

 ಆನ್‌ಲೈನ್ ದಾಖಲಾತಿ (ಸಾರ್ವಜನಿಕರಿಗೆ)

 ಆನ್‌ಲೈನ್ ದಾಖಲಾತಿ (ಏಜಂಟರಿಗೆ)

 ಪಾಸ್‌ಪೋರ್ಟ್ ಕಾಯ್ದೆ

 ತಪಶೀಲು ಪಟ್ಟಿ (ಚೆಕ್ ಲಿಸ್ಟ್)

 ದಂಡ ವಿವರ

 ಮಾಹಿತಿ ಹಕ್ಕು ಕಾಯ್ದೆ(ಎಲ್ಲಾ ಕಛೇರಿಗಳು)

ತಪಶೀಲು ಪಟ್ಟಿ (ಚೆಕ್‌ಲಿಸ್ಟ್)
ಅ. ಪಾಸ್‌ಪೋರ್ಟ್

೧) ಹೊಸ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುವ ವೇಳೆ ಕೆಳಕಂಡ ದಾಖಲೆಗಳ ಎರಡು ಜೆರಾಕ್ಸ್ ಪ್ರತಿಯನ್ನು ಲಗತ್ತಿಸಿ.

  1. ವಿಳಾಸದ ದಾಖಲೆ (ಕೆಳಕಂಡವುಗಳಲ್ಲಿ ಕನಿಷ್ಟ ಯಾವುದಾದರೂ ಒಂದನ್ನು ಲಗತ್ತಿಸಿ) ಪಡಿತರ ಚೀಟಿ, ಪ್ರತಿಷ್ಠಿತ ಕಂಪನಿಯಲ್ಲಿ ಸೇವೆ ಸಲ್ಲಿಸುತ್ತಿದ್ದಲ್ಲಿ ಕಂಪನಿಯ ಶೀರ್ಷಿತ ಪತ್ರ ಹಾಳೆಯಲ್ಲಿ ವಾಸದ ಪ್ರಮಾಣಪತ್ರ, ನೀರು/ದೂರವಾಣಿ/ವಿದ್ಯುತ್ ಬಿಲ್ಲು/ ಬ್ಯಾಂಕ್‌ನಿಂದ ನೀಡಲ್ಪಟ್ಟ ಖಾತೆ ವಿವರಪಟ್ಟಿ/ ಆದಾಯ ಕರ ನಿರ್ಣಯದ ಆದೇಶ/ ಚುನಾವಣಾ ಆಯೋಗದ ಗುರುತಿನ ಚೀಟಿ, ಅನಿಲ ಸಂಪರ್ಕದ ಬಿಲ್, ಪತಿ/ಪತ್ನಿಯ ಪಾಸ್‌ಪೋರ್ಟ್ ಪ್ರತಿ, ಅಪ್ರಾಪ್ತ ಅರ್ಜಿದಾರರಾದರೆ ಪೋಷಕ/ಪಾಲಕರ ಪಾಸ್‌ಪೋರ್ಟ್ ಪ್ರತಿ (ಟಿಪ್ಪಣಿ- ಅರ್ಜಿದಾರರು ಕೇವಲು ಪಡಿತರ ಚೀಟಿಯನ್ನು ವಿಳಾಸದ ದಾಖಲೆಯಾಗಿ ನೀಡುತ್ತಿದ್ದಲ್ಲಿ ಅದರೊಟ್ಟಿಗೆ ಮೇಲ್ಕಂಡವುಗಳಲ್ಲಿ ಕನಿಷ್ಟ ಮತ್ತೊಂದು ದಾಖಲೆಯನ್ನು ನೀಡಬೇಕು)


  2. ಜನ್ಮದಿನಾಂಕದ ದಾಖಲೆ (ಕೆಳಕಂಡವುಗಳಲ್ಲಿ ಕನಿಷ್ಟ ಯಾವುದಾದರೂ ಒಂದನ್ನು ಲಗತ್ತಿಸಿ) ನಗರಸಭೆ/ಪುರಸಭೆ/ಮಹಾನಗರ ಪಾಲಿಕೆ/ಜನನ ಮರಣ ನೋಂದಣಾಧಿಕಾರಿಗಳ ಕಛೇರಿಯಿಂದ ನೀಡಲಾಗುವ ಜನನದ ಪ್ರಮಾಣಪತ್ರ; ಅರ್ಜಿದಾರರು ತಾವು ವ್ಯಾಸಂಗ ಮಾಡಿದ ಅಂತಿಮ ಅಂಗೀಕೃತ ಶಾಲೆ ನೀಡಿರುವಂತಹ ಜನನ ಪ್ರಮಾಣಪತ್ರ ಅಥವಾ ಮ್ಯಾಜಿಸೇಟ್/ನೋಟರಿ ಮುಂದೆ ಪ್ರಮಾಣಿಕರಿಸಿದಂತಹ ಪ್ರಮಾಣಪತ್ರ (ಅನುಬಂಧ-ಎ ನಮೂನೆಯ ಪ್ರಮಾಣಪತ್ರ- ಅರೆ ಅಕ್ಷರಸ್ಥ ಹಾಗೂ ಅನಕ್ಷರಸ್ಥ ಅರ್ಜಿದಾರರಿಗೆ ಮಾತ್ರ)
    ಟಿಪ್ಪಣಿ: ದಿನಾಂಕ ೨೬-೦೧-೧೯೮೯ ನಂತರ ಹುಟ್ಟಿದ ಅರ್ಜಿದಾರರು ನಗರಸಭೆ/ಪುರಸಭೆ/ಮಹಾನಗರ ಪಾಲಿಕೆ/ಜನನ ಮರಣ ನೋಂದಣಾಧಿಕಾರಿಗಳ ಕಛೇರಿಯಿಂದ ನೀಡಲಾಗುವ ಜನನದ ಪ್ರಮಾಣಪತ್ರವನ್ನು ಸಲ್ಲಿಸಲೇಬೇಕು.


  3. ಪೌರತ್ವದ ದಾಖಲೆ:- ಅರ್ಜಿದಾರ ನೋಂದಣಿ ಅಥವಾ ನೈಸರ್ಗೀಕರಣ (Naturalisation) ದಿಂದ ಪೌರತ್ವ ಪಡೆದಿದ್ದಲ್ಲಿ.


  4. ಸರ್ಕಾರಿ/ಸಾರ್ವಜನಿಕ ಕ್ಷೇತ್ರದ ಅಧೀನ ಉದ್ದಿಮೆ/ ಕಾಯ್ದೆಯಿಂದ ರೂಪಗೊಂಡ ಸಂಸ್ಥೆಗಳ ನೌಕರರು ಅನುಬಂಧ-ಬಿ ನ ಗುರುತಿನ ಪ್ರಮಾಣಪತ್ರ ಮತ್ತು ಅನುಬಂಧ-ಐ ನ ಪ್ರಮಾಣಪತ್ರ ನೀಡಬೇಕು.


  5. ಇ.ಸಿ.ಎನ್.ಆರ್. ಗೆ ಅರ್ಹತೆ ಇದ್ದಲ್ಲಿ ಅಗತ್ಯದ ದಾಖಲೆಯ ಸ್ವ-ಪ್ರಮಾಣೀಕೃತ ಪ್ರತಿ (ಇ.ಸಿ.ಎನ್.ಆರ್ ವಿವರಗಳಿಗೆ ಕಾಲಂ ೧೫ರ- ಅರ್ಜಿ ತುಂಬಲು ಸೂಚನೆಗಳು ನೋಡಿ).ಎಫ್. ಒಂದು ವೇಳೆ ಅರ್ಜಿದಾರರು ಈ ಮೊದಲು ಭಾರತ ಸರ್ಕಾರದ ವೆಚ್ಚದಲ್ಲಿ ವಿದೇಶದಿಂದ ವಾಪಸ್ಸು ಬಂದಿದ್ದಲ್ಲಿ ಆ ವೆಚ್ಚವನ್ನು ಸರ್ಕಾರದ ಬೊಕ್ಕಸಕ್ಕೆ ಹಿಂತಿರುಗಿಸಿರುವ ದಾಖಲೆ.


  6. ಒಂದು ವೇಳೆ ಅರ್ಜಿದಾರರು ಈ ಮೊದಲು ವಿದೇಶದಿಂದ ಭಾರತಕ್ಕೆ ತುರ್ತು ಪ್ರಮಾಣಪತ್ರ (Emergency Certificate/Out pass) ವಾಪಸ್ಸು
    ಬಂದಿದ್ದಲ್ಲಿ ಅಥವಾ ಹೊರದೇಶದಿಂದ ಭಾರತಕ್ಕೆ ಗಡಿಪಾರು ಆಗಿದ್ದಲ್ಲಿ ಅದರ ದಾಖಲೆ.
೨) ೧೦ ವರ್ಷದ ಅವಧಿಯ ನಂತರ ಪಾಸ್‌ಪೋರ್ಟ್ ಪುನರ್ ನೀಡಿಕೆಗೆ ಅರ್ಜಿ ಸಲ್ಲಿಸುತ್ತಿದ್ದಲ್ಲಿ ಕೆಳಕಂಡವುಗಳನ್ನು ಲಗತ್ತಿಸಿ.

  1. ಹಳೇ ಪಾಸ್‌ಪೋರ್ಟ್ ಜೊತೆಗೆ ಸ್ವಪ್ರಮಾಣೀಕರಿಸಿದ ಮೊದಲ ನಾಲ್ಕು ಮತ್ತು ಕೊನೆಯ ನಾಲ್ಕು ಪುಟಗಳ ಜರಾಕ್ಸ್ ಪ್ರತಿ (ಇ.ಸಿ.ಆರ್/ಇ.ಸಿ.ಎನ್.ಆರ್ ಪುಟವನ್ನೊಳಗೊಂಡು)
  2. (೧)(ಡಿ) ನಲ್ಲಿ ನೀಡಲಾಗಿರುವ ದಾಖಲೆ-ಅನ್ವಯವಾಗುತ್ತಿದ್ದಲ್ಲಿ ಮಾತ್ರ
  3. (೧)ಲ ನಲ್ಲಿ ನೀಡಲಾಗಿರುವ ದಾಖಲೆ-ಒಂದುವೇಳೆ ಹಳೇ ಪಾಸ್‌ಪೋರ್ಟ್‌ನಲ್ಲಿ ಇ.ಸಿ.ಎನ್.ಆರ್. ಇಲ್ಲದಿದ್ದಲ್ಲಿ ಅಥವಾ ಅರ್ಜಿದಾರನಿಗೆ ಇ.ಸಿ.ಎನ್.ಆರ್ ಆತ ಅಪ್ರಾಪ್ತ ವಯಸ್ಕನಾಗಿದ್ದಾಗಿ ನೀಡಲ್ಪಟ್ಟಿದ್ದಲ್ಲಿ
  4. ವಿಳಾಸ ಬದಲಾವಣೆ ಇದ್ದಲ್ಲಿ- (೧)(ಎ) ನಲ್ಲಿ ನೀಡಲಾಗಿರುವ ಪಟ್ಟಿಯಲ್ಲಿನ ದಾಖಲೆ
  5. ಹಳೆ ಪಾಸ್‌ಪೋರ್ಟ್‌ನಲ್ಲಿ ಸಂಗಾತಿಯ ಹೆಸರು ಇಲ್ಲದ ಪಕ್ಷದಲ್ಲಿ, ಸಂಗಾತಿಯ ಹೆಸರನ್ನು ಸೇರಿಸಲು ವಿವಾಹ ನೋಂದಣಿ ಕಛೇರಿಯಿಂದ ಪಡೆಯಲಾಗಿರುವ ವಿವಾಹದ ಪ್ರಮಾಣಪತ್ರ ಅಥವಾ ಅನುಬಂಧ-ಡಿ ಪ್ರಮಾಣಪತ್ರ.
೩) ಅಪ್ರಾಪ್ತ ವಯಸ್ಸಿನ ಅರ್ಜಿದಾರರು ಕೆಳಕಂಡ ದಾಖಲೆಗಳನ್ನು ಲಗತ್ತಿಸಬೇಕು.

  1. ಪಾಲಕ (ತಂದೆ/ತಾಯಿ) ನೀಡಬೇಕಾಗಿರುವ ಘೋಷಣಾ ಪ್ರಮಾಣಪತ್ರ ಅನುಬಂಧ-ಹೆಚ್. ಪಾಲಕರ ಸಹಿಯೊಂದಿಗೆ, ಪಾಲಕ (ತಂದೆ/ತಾಯಿ) ಪ್ರತ್ಯೇಕವಾಗಿ ವಿಚ್ಛೇದನವಿಲ್ಲದೆ ಜೀವಿಸುತ್ತಿದ್ದಲ್ಲಿ ಮತ್ತು ಮಗು ಓರ್ವ ಪಾಲಕನ ಸುಪರ್ದಿನಲ್ಲಿದ್ದರೆ/ವೈವಾಹಿಕೇತರ ಸಂಬಂಧದಿಂದ ಮಗು ಜನಿಸಿದ್ದು ಹಾಗೂ ಓರ್ವ ಪಾಲಕನ ಸುಪರ್ದಿನಲ್ಲಿ ಇದ್ದರೆ- ಅನುಬಂಧ-ಸಿ ಪ್ರಮಾಣಪತ್ರ, ಓರ್ವ ಪಾಲಕ ಅಥವಾ ಕಾನೂನಿನಿಂದ ನೇಮಿಸಲ್ಪಟ್ಟ ಪೋಷಕ ಮಗುವಿಗಾಗಿ ಅರ್ಜಿ ಸಲ್ಲಿಸುತ್ತಿದ್ದಲ್ಲಿ ಅನುಬಂಧ-ಜಿ ಪ್ರಮಾಣಪತ್ರ (ಅರ್ಜಿದಾರ ೧೫-೧೮ ವರ್ಷ ನಡುವಿನ ವಯಸ್ಸಿನಲ್ಲಿದ್ದು ೧೦ ವರ್ಷ ಅವಧಿಯ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುತ್ತಿದ್ದಲ್ಲಿ ಅಥವಾ ಪಾಲಕರ ಬಳಿ ಪಾಸ್‌ಪೋರ್ಟ್ ಇಲ್ಲದೆ ಮಗುವಿನ ಪಾಸ್‌ಪೋರ್ಟ್‌ಗಾಗಿ ಅರ್ಜಿ ಸಲ್ಲಿಸುತ್ತಿದ್ದಲ್ಲಿ ಅನುಬಂಧ-ಐ ಪ್ರಮಾಣಪತ್ರ
  2. ಪಾಲಕರ ಪಾಸ್‌ಪೋರ್ಟ್‌ನ ಸ್ವಪ್ರಮಾಣಿಕೃತ ಜೆರಾಕ್ಸ್ ಪ್ರತಿ ಅನ್ವಯಿಸುವುದಾದಲ್ಲಿ ಮಾತ್ರ.
  3. ಪಾಲಕರ ಪಾಸ್‌ಪೋರ್ಟ್‌ನ ಮೂಲ ಪ್ರತಿಯನ್ನು ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಪರಿಶೀಲನೆಗಾಗಿ ನೀಡಬೇಕು
  4. ಓರ್ವ ಪಾಲಕ (ತಂದೆ/ತಾಯಿ) ಹೊರ ದೇಶದಲ್ಲಿ ನೆಲಸಿದ್ದಲ್ಲಿ ಭಾರತೀಯ ದೂತವಾಸ ಕಛೇರಿಯಿಂದ ಪ್ರಮಾಣೀಕರಿಸಿದ ಪ್ರಮಾಣಪತ್ರ ಮತ್ತು ಭಾರತದಲ್ಲಿ ನೆಲಸಿರುವ ಪಾಲಕನ ಪ್ರಮಾಣಪತ್ರ ನೀಡಬೇಕು.
ದಯವಿಟ್ಟು ಗಮನಿಸಿ: ಅಪ್ರಾಪ್ತ ವಯಸ್ಸಿನ (೧೮ ವರ್ಷ ಮೀರದ) ಅರ್ಜಿದಾರರಿಗೆ ಪಾಸ್‌ಪೋರ್ಟ್ ನೀಡಲು ಇಬ್ಬರು ಪಾಲಕರ (ತಂದೆ ಮತ್ತು ತಾಯಿ) ಒಪ್ಪಿಗೆ ಅತ್ಯವಶ್ಯಕವಾಗಿರುತ್ತದೆ. ಒಂದು ವೇಳೆ ಇನ್ನೋರ್ವ ಪಾಲಕನ ಒಪ್ಪಿಗೆ ಪಡೆಯಲು ಕಾರಣಾಂತರಗಳಿಂದ ಸಾಧ್ಯವಿಲ್ಲವೆಂದಾದಲ್ಲಿ ತನ್ನ ಅಪ್ರಾಪ್ತ ಮಗುವಿನ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುತ್ತಿರುವ ಪಾಲಕನು ಅನುಬಂಧ-ಜಿ ಪ್ರಮಾಣಪತ್ರ ನೀಡಬೇಕು. ಒಂದು ವೇಳೆ ಓರ್ವ ಪಾಲಕ ಅಥವಾ ಇಬ್ಬರೂ ತಂದೆ ತಾಯಿಗಳು ವಿದೇಶದಲ್ಲಿ ನೆಲಸಿದ್ದಲ್ಲಿ ಪಾಲಕನ/ರ ಒಪ್ಪಿಗೆಯನ್ನು ಭಾರತೀಯ ದೂತಾವಾಸ ಕಛೇರಿಯಲ್ಲಿ ಪ್ರಮಾಣೀಕರಿಸಿದ ಪ್ರಮಾಣಪತ್ರ ನೀಡಬೇಕು. ಒಂದು ವೇಳೆ ಅಪ್ರಾಪ್ತ ಮಗುವಿನ ತಂದೆ/ತಾಯಿ ಪಾಸ್‌ಪೋರ್ಟ್ ಹೊಂದಿದಲ್ಲಿ ಪಾಸ್‌ಪೋರ್ಟ್‌ನ ಸ್ವಪ್ರಮಾಣೀಕೃತ ಜರಾಕ್ಸ್ ಪ್ರತಿ ನೀಡಬೇಕು. ಈ ಬಗೆಯ ಸನ್ನಿವೇಶದಲ್ಲಿ ಪಾಸ್‌ಪೋರ್ಟ್‌ಅನ್ನು ಪೋಲೀಸ್ ವಿಚಾರಣೆ ಇಲ್ಲದೇ ನೀಡಲಾಗುವುದು. ಅಪ್ರಾಪ್ತ ಮಗುವಿನ ತಂದೆ ತಾಯಿ/ಪಾಲಕರ ಬಳಿ ಪಾಸ್‌ಪೋರ್ಟ್ ಇಲ್ಲದಿದ್ಡಲ್ಲಿ, ತಂದೆ ತಾಯಿ/ಪಾಲಕರು - ಪಾಸ್‌ಪೋರ್ಟ್ ಮಾಹಿತಿ ಕೈಪಿಡಿಯ ಸೆಕ್ಷನ್-೪ ಪ್ಯಾರ ಸಿ(ಬಿ) ನಲ್ಲಿ ನೀಡಲಾಗಿರುವ ದಾಖಲೆಗಳಲ್ಲಿ ಕನಿಷ್ಟ ಮೂರು ದಾಖಲೆಗಳು ಮತ್ತು ಅನುಬಂಧ-ಐ ಪ್ರಮಾಣಪತ್ರವನ್ನು ನೀಡಿದಲ್ಲಿ ಅಪ್ರಾಪ್ತ ಮಗುವಿಗೆ ಪಾಸ್‌ಪೋರ್ಟ್ ಅನ್ನು ಪೋಲೀಸ್ ವಿಚಾರಣೆ ಕಾಯ್ದಿರಿಸಿ ನೀಡಲಾಗುವುದು. ತೀರಾ ಇತ್ತೀಚೆಗೆ ಜನಿಸಿದ ಮಗುವನ್ನು ಒಳಗೊಂಡು ಎಲ್ಲಾ ವಯಸ್ಸಿನ ಮಕ್ಕಳು ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಬೇಕು. ೧೫ ವರ್ಷ ಒಳಗಿನ ಅರ್ಜಿದಾರರಿಗೆ ೫ ವರ್ಷ ಅವಧಿಯ ಅಥವಾ ಅರ್ಜಿದಾರ ೧೮ ವರ್ಷ ವಯಸ್ಸಿನವನಾಗುವವರೆಗೆ (ಯಾವುದು ಕಡಿಮೆಯೋ) ಪಾಸ್‌ಪೋರ್ಟ್ ನೀಡಲಾಗುವುದು. ಒಂದು ವೇಳೆ ಅರ್ಜಿದಾರನು ೧೫ ಮತ್ತು ೧೮ ವರ್ಷದ ಮಧ್ಯೆ ಇದ್ದಲ್ಲಿ ಮತ್ತು ೧೦ ವರ್ಷ ಅವಧಿಯ ಪಾಸ್‌ಪೋರ್ಟ್ ಬಯಸಿದಲ್ಲಿ - ಪಾಸ್‌ಪೋರ್ಟ್ ಮಾಹಿತಿ ಕೈಪಿಡಿಯ ಸೆಕ್ಷನ್-೪ ಪ್ಯಾರ ಸಿ(ಬಿ) ನಲ್ಲಿ ನೀಡಲಾಗಿರುವ ದಾಖಲೆಗಳಲ್ಲಿ ಕನಿಷ್ಟ ಮೂರು ದಾಖಲೆಗಳು (ತಂದೆ ತಾಯಿ/ಪಾಲಕರ) ಮತ್ತು ಅನುಬಂಧ-ಐ ಪ್ರಮಾಣಪತ್ರವನ್ನು ನೀಡಿದಲ್ಲಿ ಅಪ್ರಾಪ್ತ ಮಗುವಿಗೆ ಪಾಸ್‌ಪೋರ್ಟ್ ಅನ್ನು ಪೋಲೀಸ್ ವಿಚಾರಣೆ ಕಾಯ್ದಿರಿಸಿ ನೀಡಲಾಗುವುದು.
೧೦ ವರ್ಷ ಅವಧಿಯ ಪಾಸ್‌ಪೋರ್ಟ್‌ಗೆ ರೂ. ೧೦೦೦/- ಶುಲ್ಕ ನೀಡಬೇಕು. ಅಪ್ರಾಪ್ತ ಮಗು ಓರ್ವ ಪಾಲಕ (ತಂದೆ/ತಾಯಿ) ನ ಬಳಿ ಇದ್ದಲ್ಲಿ ಅಥವಾ ತಂದೆ ತಾಯಿಗಳು ಕಾನೂನುಬದ್ಧ ವಿಚ್ಚೇದನವಿಲ್ಲದೇ ಪ್ರತ್ಯೇಕವಾಗಿ ಜೀವಿಸುತ್ತಿದ್ದಲ್ಲಿ ಅನುಬಂಢ-ಸಿ ನಲ್ಲಿನ ಪ್ರಮಾಣಪತ್ರವನ್ನು ಪಾಲಕನು ನೀಡಬೇಕು.

ದತ್ತು ಪಡೆದ ಮಗುವಿಗೆ: ದತ್ತಕ ಮಕ್ಕಳಿಗೆ ಪಾಸ್‌ಪೋರ್ಟ್‌ಗಾಗಿ ಕೆಳಕಂಡ ದಾಖಲೆಗಳನ್ನು ನೀಡಬೇಕು.

  1. ಕಾನೂನುಬದ್ದ ದತ್ತಕ ಪತ್ರ (ಭಾರತೀಯ ಕಾನೂನಿನ ಅನುಸಾರ)
  2. ಕ್ರಿಶ್ಚಿಯನ್, ಮುಸ್ಲಿಂ, ಪಾರ್ಸಿಯಾದಲ್ಲಿ ನ್ಯಾಯಾಲಯದಿಂದ ಪಡೆದ ಪೋಷಕತ್ವ ನಿರ್ದೇಶನ ಮತ್ತು ದೇಶದಿಂದ ಹೊರಗೆ ಮಗುವನ್ನು ಕರೆದುಕೊಂಡು ಹೋಗಲು ಪಡೆದ ಅನುಮತಿ.
  3. ಸಂಬಂಧಪಟ್ಟ ನ್ಯಾಯಾಲಯಕ್ಕೆ ಸಲ್ಲಿಸಲಾದ ಗ್ಯಾರಂಟಿ ಪತ್ರ
ಅ. ಹೆಸರು ಬದಲಾವಣೆಗೆ

೧) ವಿವಾಹ/ಮರು ಮದುವೆ/ವಿಚ್ಚೇದನದ ನಂತರ

  1. ಮದುವೆ ನಂತರ ಪಾಸ್‌ಪೋರ್ಟ್‌ನಲ್ಲಿ ಹೆಸರು ಬದಲಾವಣೆಗೆ ಮಹಿಳೆಯು ಕೆಳಕಂಡ ದಾಖಲೆಗಳನ್ನು ನೀಡಬೇಕು.
    1. ತನ್ನ ಗಂಡನ ಪಾಸ್‌ಪೋರ್ಟ್‌ನ ಜೆರಾಕ್ಸ್ ಪ್ರತಿ-ಇದ್ದಲ್ಲಿ ಮತ್ತು
    2. ಮದುವೆ ರಿಜಿಸಾರ್ ನೀಡಿದಂತಹ ಮದುವೆ ಪ್ರಮಾಣಪತ್ರದ ಪ್ರತಿ ಮೂಲ ದಾಖಲೆಯೊಂದಿಗೆ ಅಥವಾ ದಂಪತಿಗಳಿಬ್ಬರೂ ಸಹಿ ಮಾಡಿರುವ ಪ್ರಮಾಣಪತ್ರ ಅನುಬಂಧ-ಡಿ ನಮೂನೆ (ಜಂಟಿ ಬಾವಚಿತ್ರದೊಂದಿಗೆ).

  2. ವಿಚ್ಚೇದಿತರು ತಮ್ಮ ಹೆಸರು ಬದಲಾವಣೆ ಅಥವಾ ಸಂಗಾತಿಯ ಹೆಸರನ್ನು ಪಾಸ್‌ಪೋರ್ಟ್‌ನಿಂದ ತೆಗೆದು ಹಾಕಿಸಲಿಕ್ಕೆ ಕೆಳಕಂಡ ದಾಖಲೆ ನೀಡಬೇಕು.
    1. ವಿಚ್ಚೇದನದ ಪ್ರತಿ.
    2. ಅನುಬಂಧ-ಇ ಪ್ರಮಾಣಪತ್ರ

  3. ಮರು ಮದುವೆಯಾದ ಅರ್ಜಿದಾರರು ತಮ್ಮ ಹೆಸರು ಬದಲಾವಣೆಗೆ/ಸಂಗಾತಿಯ ಹೆಸರು ನಮೂದಿಸಲು ಕೆಳಕಂಡ ದಾಖಲೆಗಳನ್ನು ನೀಡಬೇಕು.
    1. ವಿಚ್ಚೇದನದ ಪ್ರತಿ/ಮರಣ ಪ್ರಮಾಣಪತ್ರ ಒಂದು ವೇಳೆ ಪ್ರಥಮ ಸಂಗಾತಿ ಮರಣ ಹೊಂದಿದ್ದರೆ
    2. ಮೇಲಿನ ಕಾಲಂ-ಎ ನಲ್ಲಿನ ದಾಖಲೆ - ೨ನೇ ಮದುವೆಗೆ ಸಂಬಂಧಿಸಿದಂತೆ.
೨) ಮೇಲಿನ ಸನ್ನಿವೇಶಗಳನ್ನು ಹೊರತುಪಡಿಸಿ ಬೇರೆ ಯಾವುದೇ ಸಂದರ್ಭದಲ್ಲಿ ಹೆಸರು ಬದಲಾವಣೆಗೆ ಅರ್ಜಿದಾರರು ಕೆಳಕಂಡ ದಾಖಲೆಗಳನ್ನು ನೀಡಬೇಕು

  1. ಅನುಬಂಧ-ಇ ಪ್ರಮಾಣಪತ್ರ
  2. ಕನಿಷ್ಟ ೨ ದಿನಪತ್ರಿಕೆಗಳಲ್ಲಿ ಹೆಸರು ಬದಲಾವಣೆ ಬಗ್ಗೆ ನೀಡಲಾಗಿರುವ ಜಾಹೀರಾತಿನ ಮೂಲ ಪ್ರತಿ. ಅರ್ಜಿದಾರರು ಪ್ರಸ್ತುತ ಅಥವಾ ಖಾಯಂ ವಿಳಾಸ ಅಥವಾ ಹತ್ತಿರದ ಸ್ಥಳದ ದಿನಪತ್ರಿಕೆಗಳಲ್ಲಿ ಜಾಹೀರಾತು ನೀಡಬೇಕು.

 ಪೀಠಿಕೆ

 ಕಛೇರಿ ವಿಳಾಸ

 ಕಛೇರಿ ಸಮಯ

 ರಜಾದಿನಗಳು

 ಕಾರ್ಯ ವ್ಯಾಪ್ತಿ

 ಕೌಂಟರ್ ವಿವರ

 ದೂರುಗಳು

 ಅರ್ಜಿಯ ಪ್ರಸ್ತುತ ಸ್ಥಿತಿ

 ಟೆಲಿ ವಿಚಾರಣೆ

 ವಿಲೇವಾರಿಯಾಗಿರುವ ಅರ್ಜಿಗಳು

 ನಿಮ್ಮ ಪೈಲ್ ಸಂಖ್ಯೆ-ಪತ್ತೆ ಮಾಡಿ

 ಅದಾಲತ್

 ಮಾಹಿತಿ ಹಕ್ಕು ಕಾಯ್ದೆ ಬೆಂಗಳೂರು

 ಬೆಂಗಳೂರು
ಓನ್ ಕೇಂದ್ರಗಳು

 ಶೀಘ್ರ ಅಂಚೆ
ಕೇಂದ್ರಗಳು

 ಜಿಲ್ಲಾವಾರು ಪಾಸ್‌ಪೋರ್ಟ್ ಘಟಕಗಳು

 ಮಾನ್ಯತೆ ಹೊಂದಿದ ಟ್ರಾವೆಲ್ ಏಜಂಟ್‌ಗಳು

 ಆವರ್ತಕ ಪ್ರಶ್ನೆಗಳು

Copyright 2008, Regional Passport Office This site is best viewed in 1024 x 768 resolution Hosted by National Informatics Center.