ಆವರ್ತಕ ಪ್ರಶ್ನೆಗಳು
|
|
| ಪ್ರಾದೇಶಿಕ ಪಾಸ್‌ಪೋರ್ಟ್ ಕಛೇರಿ, ಬೆಂಗಳೂರಿನ ಅಧಿಕಾರವ್ಯಾಪ್ತಿ ಸಂಪೂರ್ಣ ಕರ್ನಾಟಕ ರಾಜ್ಯದ ಭೌಗೋಳಿಕ ಕ್ಷೇತ್ರವನ್ನು ಒಳಗೊಂಡಿರುತ್ತದೆ. ಪಾಸ್‌ಪೋರ್ಟ್ ಕಛೇರಿಯು ಕರ್ನಾಟಕದಲ್ಲಿ ನೆಲೆಸಿರುವ ಎಲ್ಲಾ ಅರ್ಜಿದಾರರಿಗೆ ಪಾಸ್‌ಪೋರ್ಟ್ ಮತ್ತು ಸಂಬಂಧಪಟ್ಟ ಸೇವೆಯನ್ನು ನೀಡುತ್ತದೆ. |
ಕರ್ನಾಟಕ ರಾಜ್ಯದ ಶೈಕ್ಷಣಿಕ ಸಂಸ್ಥೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ತಮ್ಮ ಸಂಸ್ಥೆಯಿಂದ ನೀಡಲ್ಪಡುವ ಪ್ರಮಾಣಪತ್ರ (Bonafide Certificate) ದೊಂದಿಗೆ ಪಾಸ್‌ಪೋರ್ಟ್‌ಗಾಗಿ ಅರ್ಜಿ ಸಲ್ಲಿಸಬಹುದು.
|
|
ನೀವು ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವುದರಿಂದ ಪಾಸ್‌ಪೋರ್ಟ್ ಪುನರ್ ನೀಡಿಕೆಗೆ ಅರ್ಜಿಯನ್ನು ಪ್ರಾದೇಶಿಕ ಪಾಸ್‌ಪೋರ್ಟ್ ಕಛೇರಿ, ಬೆಂಗಳೂರಿನಲ್ಲಿ ಅರ್ಜಿ ಸಲ್ಲಿಸಬೇಕು. ತುಂಬಬೇಕಾದ ಅರ್ಜಿ ನಮೂನೆ-೧
|
|
ಸಾಮಾನ್ಯವಾಗಿ ಪ್ರತಿಷ್ಠಿತ ಕಂಪನಿಗಳ ಗುತ್ತಿಗೆ ಕರಾರನ್ನು ವಿಳಾಸದ ದಾಖಲೆಗಾಗಿ ನೀಡಬಹುದು. ಇದರ ಜೊತೆಗೆ ಪೂರಕವಾಗಿ ನಿಮ್ಮ ಹೆಸರಿನಲ್ಲಿ ಈ ವಿಳಾಸದಲ್ಲಿ ಇರುವ ದೂರವಾಣಿ ಬಿಲ್ಲು ಅಥವಾ ಬ್ಯಾಂಕ್ ಖಾತೆಯ ವಿವರದ ಪ್ರತಿಯನ್ನು ಸಲ್ಲಿಸಬೇಕು.
|
|
ಬೆಂಗಳೂರು ಪಾಸ್‌ಪೋರ್ಟ್ ಕಛೇರಿಯ ರಜೆಗಳ ಪಟ್ಟಿಗೆ ಇಲ್ಲಿ ಮಾಡಿ.
|
|
ಪಾಸ್‌ಪೋರ್ಟ್ ಕಛೇರಿಯ ಕೌಂಟರ್‌ಗಳ ವಿವರದ ನಕ್ಷೆಗೆ ಇಲ್ಲಿ ಮಾಡಿ. ಈ ಬಗ್ಗೆ ನಮ್ಮ ವಿಚಾರಣೆ ಕೌಂಟರ್‌ನಲ್ಲಿಯೂ ಈ ಬಗ್ಗೆ ಕೇಳಿ ತಿಳಿಯಬಹುದು.
|
|
ರೂ.೨೦.೦೦ ನ್ಯಾಯಿಕೇತರ
|
|
ತಪ್ಪು. ಪಾಸ್‌ಪೋರ್ಟ್ ಅರ್ಜಿಯ ಸಂಸ್ಕರಣೆ ಆದ್ಯತೆ ಮೇರೆಗೆ (ಮೊದಲು ಸಲ್ಲಿಸಿದ ಅರ್ಜಿ ಮೊದಲು ವಿಲೇವಾರಿ) ಆಗುತ್ತದೆ. ಒಂದು ವೇಳೆ ಅರ್ಜಿದಾರರಿಗೆ ಶೀಘ್ರವಾಗಿ ಪಾಸ್‌ಪೋರ್ಟ್ ಬೇಕಿದ್ದಲ್ಲಿ ತತ್ಕಾಲ್ ವ್ಯವಸ್ಥೆಯ ಅಡಿ ಅಗತ್ಯದ ದಾಖಲೆ ಮತ್ತು ಹೆಚ್ಚುವರಿ ಹಣವನ್ನು ಪಾಸ್‌ಪೋರ್ಟ್ ಕಛೇರಿಗೆ ಸಂದಾಯ ಮಾಡಬೇಕಾಗಿರುತ್ತದೆ. ಏಜೆಂಟ್/ದಳ್ಳಾಳಿಗಳ ಮರಳು ಮಾತಿಗೆ ಮೋಸ ಹೋಗಬೇಡಿ.
|
|
ಅಫಿಡೆವಿಟ್‌ಗಳ ನಮೂನೆ ಪಾಸ್‌ಪೋರ್ಟ್ ಅರ್ಜಿಯೊಂದಿಗಿನ ಪಾಸ್‌ಪೋರ್ಟ್ ಮಾಹಿತಿ ಕೈಪಿಡಿಯಲ್ಲಿ ಇರುತ್ತದೆ. ಇವುಗಳನ್ನು ನಮ್ಮ ವೆಬ್‌ಸೈಟ್‌ನಿಂದಲೂ ಡೌನ್‌ಲೋಡ್ ಮಾಡಿಕೊಳ್ಳಬಹುದು.
|
|
ಇಲ್ಲ. ಅರ್ಜಿದಾರರು ಮುಂಜಾನೆಯೇ ಬರುವ ಅಗತ್ಯವಿರುವುದಿಲ್ಲ. ಸರಿಸುಮಾರು ಬೆಳಿಗ್ಗೆ ೮.೩೦-೯.೦೦ ಸುಮಾರಿಗೆ ಬಂದು ಟೋಕನ್ ತೆಗೆದುಕೊಂಡು ತಮ್ಮ ಅರ್ಜಿಯನ್ನು ಸಲ್ಲಿಸಬಹುದು. ಪ್ರತೀ ದಿನವೂ ಸುಮಾರು ೨೫೦ ರಿಂದ ೩೦೦ ಟೋಕನ್‌ಗಳನ್ನು ನೀಡಲಾಗುತ್ತದೆ. ಬೆಂಗಳೂರಿನ ಅರ್ಜಿದಾರರು ತಮ್ಮ ಪಾಸ್‌ಪೋರ್ಟ್ ಅರ್ಜಿಯನ್ನು ಸಮೀಪದ ಬೆಂಗಳೂರು ಓನ್ ಕೇಂದ್ರಗಳಲ್ಲಿಯೂ ಸಲ್ಲಿಸಬಹುದು. ಬೇರೆ ಜಿಲ್ಲೆಗಳ ಅರ್ಜಿದಾರರು ಸಮೀಪದ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳ ಕಛೇರಿಯಲ್ಲಿ ಮತ್ತು ಸ್ಪೀಡ್‌ಪೋಸ್ಟ್ ಅಂಚೆ ಕಛೇರಿಗಳಲ್ಲಿ ಸಲ್ಲಿಸಬಹುದು. ಅರ್ಜಿದಾರರು ಆನ್‌ಲೈನ್ ಮುಖಾಂತರವೂ ನೋಂದಣಿ ಮಾಡಿಕೊಂಡು ಅರ್ಜಿಯನ್ನು ನಿಗಧಿತ ಸಮಯದಲ್ಲಿ ಪಾಸ್‌ಪೋರ್ಟ್ ಕಛೇರಿಗೆ ಬಂದು ಸಲ್ಲಿಸಬಹುದು.
|
|
೧೫ ವರ್ಷ ಒಳಗಿನ ಅರ್ಜಿದಾರರು-ಓರ್ವ ಪಾಲಕ (ತಂದೆ/ತಾಯಿ) ಊರ್ಜಿತ ಪಾಸ್‌ಪೋರ್ಟ್ ಹೊಂದಿದ್ದಲ್ಲಿ. ಸರ್ಕಾರಿ ನೌಕರರು ಮತ್ತವರ ಅವಲಂಬಿತರು- ಅನುಬಂಧ-ಬಿ ಗುರುತಿನ ಸರ್ಟಿಫಿಕೇಟ್ ಕೊಟ್ಟಲ್ಲಿ. ರಾಜತಾಂತ್ರಿಕ/ಅಧಿಕೃತ ಪಾಸ್‌ಪೋರ್ಟ್‌ದಾರರು ಸಾಮಾನ್ಯ ಪಾಸ್‌ಪೋರ್ಟ್‌ಗಾಗಿ ಅರ್ಜಿ ಸಲ್ಲಿಸಿದ್ದಲ್ಲಿ. ನಿವೃತ್ತ ಸರ್ಕಾರಿ ನೌಕರರು-ಈ ಮೊದಲು ರಾಜತಾಂತ್ರಿಕ/ಅಧಿಕೃತ ಪಾಸ್‌ಪೋರ್ಟ್ ಹೊಂದಿದ್ದಲ್ಲಿ.
|
|
ಹೌದು. ಅರ್ಜಿಯೊಂದಿಗೆ ಮದುವೆಯ ಪ್ರಮಾಣಪತ್ರ/ಜಂಟಿ ಹೇಳಿಕೆಯ ಪ್ರಮಾಣಪತ್ರವನ್ನು ಸಲ್ಲಿಸಬೇಕು.
|
|
ಪಡಿತರ ಚೀಟಿ, ಬ್ಯಾಂಕ್ ಖಾತೆಯ ವಿವರ ಮತ್ತು ಸಂಬಂಧಪಟ್ಟ ಬ್ಯಾಂಕ್‌ನಿಂದ ನೀಡಲ್ಪಡುವ ವಿಳಾಸದ ದಾಖಲೆ, ಪ್ರತಿಷ್ಠಿತ ಕಂಪನಿಯ ಶೀರ್ಷಿತ ಹಾಳೆಯಲ್ಲಿ ನೀಡಲಾಗುವ ವಿಳಾಸದ ದಾಖಲೆ, ಚುನಾವಣೆ ಗುರುತಿನ ಚೀಟಿ, ಸಂಬಂಧಪಟ್ಟ ಆಡಳಿತ ಇಲಾಖೆಯಿಂದ ನೀಡಲಾಗುವ ಪತ್ರ (ಸರ್ಕಾರಿ ನೌಕರರಿಗೆ), ಆದಾಯ ತೆರಿಗೆ ನಿರ್ಧಾರಣ ದಾಖಲೆ, ಸಂಗಾತಿಯ ಪಾಸ್‌ಪೋರ್ಟ್ ಪ್ರತಿ, ಪಾಲಕರ ಪಾಸ್‌ಪೋರ್ಟ್ ಪ್ರತಿ (ಅವಯಸ್ಕ ಅರ್ಜಿದಾರರಿಗೆ), ತಹಶೀಲ್ದಾರ್ ಇವರಿಂದ ನೀಡಲಾಗುವ ವಾಸಸ್ಥಳದ ಪ್ರಮಾಣಪತ್ರ, ನೀರಿನ ಬಿಲ್/ ದೂರವಾಣಿ ಬಿಲ್/ವಿದ್ಯುತ್ ಬಿಲ್ ಮತ್ತು ಗ್ಯಾಸ್ ಕನೆಕ್ಷನ್ ದಾಖಲೆ, ಆಸ್ತಿ ತೆರಿಗೆಯ ಪ್ರತಿ, ಗುತ್ತಿಗೆ ಕರಾರು ಪತ್ರ-ಪೂರಕವಾಗಿ ದೂರವಾಣಿ ಬಿಲ್.
|
|
ಅರ್ಜಿ ನಮೂನೆ ಸಂಖ್ಯೆ-೨ ಅನ್ನು ತುಂಬಿ ಅಗತ್ಯದ ಶುಲ್ಕವನ್ನು ಭರಿಸಿದಲ್ಲಿ ನಿಮ್ಮ ಹೆಸರಿನಿಂದ ಉಪನಾಮವನ್ನು ಬೇರ್ಪಡಿಸಿ ಹೊಸ ಪಾಸ್‌ಪೋರ್ಟ್ ಅನ್ನು ನೀಡಲಾಗುವುದು. ತುರ್ತು ಸಂದರ್ಭದಲ್ಲಿ ತತ್ಕಾಲ್ ಯೋಜನೆಯಡಿ ಸಹ ಈ ಬೇರ್ಪಡಿಕೆಯನ್ನು ಮಾಡಿಸಿಕೊಳ್ಳಬಹುದು.
|
|
ನೀವು ಹೆಚ್ಚುವರೆ ಪುಸ್ತಿಕೆಗಾಗಿ ಅರ್ಜಿ ನಮೂನೆ-೨ ಅನ್ನು ತುಂಬಿ ನಿಮ್ಮ ಮದುವೆಯ ಪ್ರಮಾಣಪತ್ರದ ಪ್ರತಿಂiಂದಿಗೆ ಸಲ್ಲಿಸಬೇಕು. ನಿಮ್ಮ ಸಂಗಾತಿಯ ಪಾಸ್‌ಪೋರ್ಟ್ (ಇದ್ದಲ್ಲಿ) ಅನ್ನು ಪರಿಶೀಲನೆಗೆ ನೀಡಬೇಕು. ಮದುವೆ ಪ್ರಮಾಣಪತ್ರ ಇಲ್ಲದಿದ್ದಲ್ಲಿ ಜಂಟಿ ಹೇಳಿಕೆಯ ನೋಟರೀಕೃತ ಪ್ರಮಾಣಪತ್ರವನ್ನು (ಜಂಟಿ ಭಾವಚಿತ್ರದೊಂದಿಗೆ) ಸಲ್ಲಿಸಬೇಕು. ಈ ಬಗೆಯ ಸಂದರ್ಭದಲ್ಲಿ ಸಂಗಾತಿಯ ಹೆಸರನ್ನು ಸೇರ್ಪಡಿಸಿ ಹೆಚ್ಚುವರಿ ಪಾಸ್‌ಪೋರ್ಟ್ ಪುಸ್ತಿಕೆಯನ್ನು ನೀಡಲಾಗುವುದು.
|
|
ಪೋಲೀಸ್ ಪ್ರಮಾಣಪತ್ರ, ಇ.ಸಿ.ಎನ್.ಆರ್, ಸಂಗಾತಿಯ ಹೆಸರಿನ ಸೇರ್ಪಡೆ/ತೆಗೆದು ಹಾಕುವಿಕೆ, ಹೆಸರು ಬದಲಾವಣೆ, ಪ್ರಥಮ ನಾಮ ಮತ್ತು ಉಪನಾಮಗಳ ಬೇರ್ಪಡೆ, ಅವಧಿ ವಿಸ್ತರಣೆ (ಸೀಮಿತ ಅವಧಿಗೆ ಪಾಸ್‌ಪೋರ್ಟ್ ನೀಡಿದ್ದಲ್ಲಿ ಮಾತ್ರ), ಹೆಚ್ಚುವರಿ ಪುಸ್ತಿಕೆ, ಪಾಸ್‌ಪೋರ್ಟ್‌ನಲ್ಲಿ ನಮೂದಿತವಾಗಿರುವ ತಪ್ಪು ಮಾಹಿತಿ ತೆಗೆದುಹಾಕಲು, ವಿಳಾಸದ ಬದಲಾವಣೆ, ಜನ್ಮದಿನಾಂಕ-ಜನ್ಮಸ್ಥಳದ ಬದಲಾವಣೆ, ಪಾಸ್‌ಪೋರ್ಟ್‌ನಲ್ಲಿ ನಮೂದಿತವಾಗಿರುವ ಸಹಿಯ ಬದಲಾವಣೆ, ಭಾವಚಿತ್ರದ ಬದಲಾವಣೆ (ಮುಖ ಚಹರೆ ಬದಲಾಗಿದ್ದಲ್ಲಿ ಮಾತ್ರ), ಕಳೆದುಹೋದ/ಹಾನಿಗೊಳಗಾದ ಪಾಸ್‌ಪೋರ್ಟ್‌ಗಳು,
|
|
ಹೌದು. ಅರ್ಜಿದಾರರು ತಮಗೆ ಅಗತ್ಯವಿರುವ ಸೇವೆಯ ವಿವರವನ್ನು ಅರ್ಜಿಯ ಮೇಲ್ಭಾಗದಲ್ಲಿ ಸ್ಪಷ್ಟವಾಗಿ ನಮೂದಿಸಬೇಕು.
|
|
ನಮೂನೆ-೧: ಹೊಸ ಪಾಸ್‌ಪೋರ್ಟ್/ಮರು ನೀಡಿಕೆ/ಕಳೆದು ಹೋದ/ ಹಾನಿಗೊಳಗಾದ/ನೇರ ತತ್ಕಾಲ್/ಹೆಚ್ಚುವರಿ ಪುಸ್ತಿಕೆಗಾಗಿ. ಅರ್ಜಿ ನಮೂನೆ-೧ ಅನ್ನು ಅಪ್ರಾಪ್ತ/ಮಕ್ಕಳ ಪಾಸ್‌ಪೋರ್ಟ್‌ಗಾಗಿಯೂ ಬಳಸಬಹುದು.
|
ನಮೂನೆ-೨: ಪೋಲೀಸ್ ಪ್ರಮಾಣಪತ್ರ, ಇ.ಸಿ.ಎನ್.ಆರ್, ಸಂಗಾತಿಯ ಹೆಸರಿನ ಸೇರ್ಪಡೆ/ತೆಗೆದು ಹಾಕುವಿಕೆ, ಹೆಸರು ಬದಲಾವಣೆ, ಪ್ರಥಮ ನಾಮ ಮತ್ತು ಉಪನಾಮಗಳ ಬೇರ್ಪಡೆ, ಅವಧಿ ವಿಸ್ತರಣೆ (ಸೀಮಿತ ಅವಧಿಗೆ ಪಾಸ್‌ಪೋರ್ಟ್ ನೀಡಿದ್ದಲ್ಲಿ ಮಾತ್ರ), ಹೆಚ್ಚುವರಿ ಪುಸ್ತಿಕೆ, ಪಾಸ್‌ಪೋರ್ಟ್‌ನಲ್ಲಿ ನಮೂದಿತವಾಗಿರುವ ತಪ್ಪು ಮಾಹಿತಿ ತೆಗೆದುಹಾಕಲು, ವಿಳಾಸದ ಬದಲಾವಣೆ, ಜನ್ಮದಿನಾಂಕ-ಜನ್ಮಸ್ಥಳದ ಬದಲಾವಣೆ, ಪಾಸ್‌ಪೋರ್ಟ್‌ನಲ್ಲಿ ನಮೂದಿತವಾಗಿರುವ ಸಹಿಯ ಬದಲಾವಣೆ, ಭಾವಚಿತ್ರದ ಬದಲಾವಣೆ (ಮುಖ ಚಹರೆ ಬದಲಾಗಿದ್ದಲ್ಲಿ ಮಾತ್ರ), ಕಳೆದುಹೋದ/ಹಾನಿಗೊಳಗಾದ ಪಾಸ್‌ಪೋರ್ಟ್‌ಗಳು,
|
|
ಪಾಸ್‌ಪೋರ್ಟ್ ಕಛೇರಿ. ಬೆಂಗಳೂರು ಓನ್ ಕೇಂದ್ರಗಳು, ಸ್ಪೀಡ್‌ಪೋಸ್ಟ್ ಅಂಚೆ ಕಛೇರಿಗಳು ಮತ್ತು ಜಿಲ್ಲಾ ವರಿಷ್ಠಾಧಿಕಾರಿಗಳ ಕಛೇರಿಗಳು. ಪಾಸ್‌ಪೋರ್ಟ್ ಅರ್ಜಿಯನ್ನು ವೆಬ್‌ಸೈಟ್ ಮೂಲಕವೂ ಡೌನ್‌ಲೋಡ್ ಮಾಡಿಕೊಳ್ಳಬಹುದು.
|
|
ಹೌದು. ಅರ್ಜಿದಾರರು ತಮ್ಮ ಅರ್ಜಿಗಳನ್ನು ಸೂಚಿಸಿದ ಸ್ಪೀಡ್‌ಪೋಸ್ಟ್ ಅಂಚೆ ಕಛೇರಿಗಳಲ್ಲಿ ಸಲ್ಲಿಸಬಹುದು. ಕರ್ನಾಟಕದಲ್ಲಿ ಪಾಸ್‌ಪೋರ್ಟ್ ಸೇವೆಯನ್ನು ನೀಡುತ್ತಿರುವ ಸ್ಪೀಡ್‌ಪೋಸ್ಟ್ ಅಂಚೆ ಕಛೇರಿಗಳ ವಿವರಕ್ಕೆ ನಮ್ಮ ಸ್ಪೀಡ್‌ಪೋಸ್ಟ್ ಪಾಸ್‌ಪೋಸ್ಟ್ ಸರ್ವೀಸ್ ವಿಭಾಗವನ್ನು ನೋಡಿ.
|
|
ಹೌದು. ಅರ್ಜಿದಾರರು ತಮ್ಮ ಅರ್ಜಿಗಳನ್ನು ಆಯಾ ಜಿಲ್ಲೆಗಳ ಪೋಲೀಸ್ ವರಿಷ್ಠಾಧಿಕಾರಿಗಳ ಕಛೇರಿಯಲ್ಲಿರುವ ಜಿಲ್ಲಾ ಪಾಸ್‌ಪೋರ್ಟ್ ಸೆಲ್‌ಗಳಲ್ಲಿ ಸಲ್ಲಿಸಬಹುದು. ಕರ್ನಾಟಕದಲ್ಲಿ ಜಿಲ್ಲಾ ಪಾಸ್‌ಪೋರ್ಟ್ ಸೆಲ್‌ಗಳ ವಿವರಕ್ಕೆ ನಮ್ಮ ಜಿಲ್ಲಾ ಪಾಸ್‌ಪೋಸ್ಟ್ ಸೆಲ್ ವಿಭಾಗವನ್ನು ನೋಡಿ.
|