ಹೋಂ ಪೇಜ್ ಸಂಪರ್ಕಿಸಿ ನಮ್ಮಬಗ್ಗೆ ಫೋಟೋ ಗ್ಯಾಲರಿ ಸೈಟ್ ನಕ್ಷೆ
 

 ಅರ್ಜಿ ನಮೂನೆಗಳು

 ಫಾರಂ ತುಂಬುವ ವಿಧಾನಗಳು

 ಪ್ರಮಾಣಪತ್ರಗಳು

 ಶುಲ್ಕ ವಿವರ

 ಅರ್ಜಿ ಸಲ್ಲಿಸುವ ವಿಧಾನ

 ತತ್ಕಾಲ್ ಸೇವೆ ಮಾಹಿತಿ

 ಆನ್‌ಲೈನ್ ದಾಖಲಾತಿ (ಸಾರ್ವಜನಿಕರಿಗೆ)

 ಆನ್‌ಲೈನ್ ದಾಖಲಾತಿ (ಏಜಂಟರಿಗೆ)

 ಪಾಸ್‌ಪೋರ್ಟ್ ಕಾಯ್ದೆ

 ತಪಶೀಲು ಪಟ್ಟಿ (ಚೆಕ್ ಲಿಸ್ಟ್)

 ದಂಡ ವಿವರ

 ಮಾಹಿತಿ ಹಕ್ಕು ಕಾಯ್ದೆ(ಎಲ್ಲಾ ಕಛೇರಿಗಳು)

ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುವ ವಿಧಾನ

೧) ಮೊದಲಿಗೆ ಪಾಸ್‌ಪೋರ್ಟ್ ಅರ್ಜಿಯನ್ನು ಪಡೆದುಕೊಳ್ಳಿ, ಪಾಸ್‌ಪೋರ್ಟ್‌ಗಾಗಿ ಅರ್ಜಿಯನ್ನು ಆನ್‌ಲೈನ್ ಮುಖಾಂತರವೂ ಸಲ್ಲಿಸಬಹುದು. ಅನ್‌ಲೈನ್ ವ್ಯವಸ್ಥೆಯ ಬಗ್ಗೆ ತಿಳಿಯಲು ವೈಬ್‌ಸೈಟ್‌ನ ಆನ್‌ಲೈನ್ ವಿಭಾಗವನ್ನು ನೋಡಿ. ಅರ್ಜಿದಾರನು ತನ್ನ ಅರ್ಜಿಯನ್ನು ಪಾಸ್‌ಪೋರ್ಟ್ ಕಛೇರಿ/ ಜಿಲ್ಲಾ ಪಾಸ್‌ಪೋರ್ಟ್ ಸೆಲ್ (ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಯವರ ಕಛೇರಿಯಲ್ಲಿ) ಮತ್ತು ಸ್ಪೀಡ್ ಪೋಸ್ಟ್ ಅಂಚೆ ಕಛೇರಿಗಳಲ್ಲಿಯೂ ಸಲ್ಲಿಸಬಹುದು.

೨) ಅರ್ಜಿ ತುಂಬುವ ಬಗೆ:- ಪಾಸ್‌ಪೋರ್ಟ್ ಅರ್ಜಿ ನಮೂನೆಯು ಯಂತ್ರ ಗುರುತಿಸಬಲ್ಲದಾಗಿದ್ದು(Machine readable) ಅದನ್ನು ತುಂಬಲು ಕೆಳಕಂಡ ನಿರ್ದೇಶನಗಳನ್ನು ಅನುಸರಿಸಿ.

  • ಇಂಗ್ಲೀಷ್ ವರ್ಣಮಾಲೆಯ ದೊಡ್ಡ ಅಕ್ಷರ (Capital letters) ಗಳನ್ನು ಬಳಸಿ. ನೀವು ಬರೆದಿರುವ ವಿವರಗಳೇ ಪಾಸ್‌ಪೋರ್ಟ್‌ನಲ್ಲಿ ಮುದ್ರಿತವಾಗುತ್ತವೆ. ಹಾಗಾಗಿ ದಯವಿಟ್ಟು ಎಚ್ಚರವಹಿಸಿ ಸಾವದಾನವಾಗಿ ಅರ್ಜಿ ನಮೂನೆಯನ್ನು ತಪ್ಪಿಲ್ಲದೇ ತುಂಬಿಸಿ
  • ಕಪ್ಪು ಅಥವಾ ನೀಲಿ ಬಣ್ಣದ ಬಾಲ್ ಪೆನ್ನನ್ನು ಉಪಯೋಗಿಸಿ.
  • ಪೆನ್ಸಿಲ್ ಅಥವಾ ಇಂಕ್ ಪೆನ್ನನ್ನು ಬಳಸಬೇಡಿ.
  • ಪ್ರತಿಯೊಂದು ಪದದ ನಂತರದ ಚೌಕಟ್ಟನ್ನು ಖಾಲಿ ಬಿಡಿ.
  • ಚೌಕಟ್ಟನ್ನು ಮೀರದಂತೆ ಪದವನ್ನು ಬರೆಯಿರಿ.
  • ಚೌಕಟ್ಟಿನ ಹೊರಗೆ ಏನನ್ನೂ ಬರೆಯದಿರಿ.
  • ಅಸಂಪೂರ್ಣ ಮಾಹಿತಿಯ ಅರ್ಜಿಯನ್ನು ತಿರಸ್ಕರಿಸಲಾಗುವುದು.
ಕಾಲಂ ಅನುಸಾರ ತುಂಬಲು ಅನುಸರಿಸಬೇಕಾದ ನಿರ್ದೇಶನಗಳ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ಟಿಪ್ಪಣಿ: ಎಲ್ಲಾ ಮೂಲ ದಾಖಲೆಗಳನ್ನು ಪಾಸ್‌ಪೋರ್ಟ್ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ತೋರಿಸಬೇಕು. ಪಾಸ್‌ಪೋರ್ಟ್ ಅರ್ಜಿ ಜೊತೆಗೆ ಸ್ವ-ಪ್ರಮಾಣೀಕರಿಸಿದ ಎಲ್ಲಾ ದಾಖಲೆಗಳ ಪ್ರತಿಯನ್ನು ಲಗತ್ತಿಸಬೇಕು. ಅನಕ್ಷರಸ್ಥ ಅರ್ಜಿದಾರರು ತಮ್ಮ ಹೆಬ್ಬಟ್ಟಿನ ಗುರುತನ್ನು ಸಹಿ/ಹೆಬ್ಬಟ್ಟಿನ ಗುರುತಿಗಾಗಿ ಇರುವ ಚೌಕಟ್ಟಿನಲ್ಲಿ ಹಾಕಬೇಕು. ಒಂದು ವೇಳೆ ಅರ್ಜಿದಾರನು ತಾನು ಕಳೆದ ಕೊನೆಯ ಒಂದು ವರ್ಷದಲ್ಲಿ ಒಂದಕ್ಕಿಂತ ಹೆಚ್ಚು ವಿಳಾಸದಲ್ಲಿ ನೆಲಸಿದ್ದಲ್ಲಿ-ಅಂತಹ ಅರ್ಜಿದಾರರು ವಿಳಾಸದ ವಿವರಗಳ ಪ್ರತ್ಯೇಕ ವೈಯುಕ್ತಿಕ ವಿವರ ಫಾರಂ ಅನ್ನು ತುಂಬಬೇಕು.

೩) ಅರ್ಜಿ ಸಲ್ಲಿಕೆ:- ಆನ್‌ಲೈನ್ ನೋಂದಣಿ ಮಾಡುವ ಅರ್ಜಿದಾರರು ತಮ್ಮ ಅರ್ಜಿಯನ್ನು ಸಲ್ಲಿಕೆ ಕೊಡಲ್ಪಟ್ಟ ದಿನಾಂಕ/ಸಮಯದಂದು ಪಾಸ್‌ಪೋರ್ಟ್ ಕಛೇರಿಯಲ್ಲಿ ಸಲ್ಲಿಸಬಹುದು. ಎಲ್ಲಾ ಮೂಲ ದಾಖಲೆಗಳನ್ನು ತೋರಿಸುವುದು ಅತ್ಯಗತ್ಯವಾಗಿರುತ್ತದೆ. ಇದರ ಹೊರತಾಗಿ ಪಾಸ್‌ಪೋರ್ಟ್ ಅರ್ಜಿಯನ್ನು ಕೆಳಕಂಡ ಸ್ಥಳಗಳಲ್ಲಿಯು ಸಲ್ಲಿಸಬಹುದು.

  • ಪಾಸ್‌ಪೋರ್ಟ್ ಕಛೇರಿಯ ಕೌಂಟರ್ (Capital letters) ಗಳನ್ನು ಬಳಸಿ. ನೀವು ಬರೆದಿರುವ ವಿವರಗಳೇ ಪಾಸ್‌ಪೋರ್ಟ್‌ನಲ್ಲಿ ಮುದ್ರಿತವಾಗುತ್ತವೆ. ಹಾಗಾಗಿ ದಯವಿಟ್ಟು ಎಚ್ಚರವಹಿಸಿ ಸಾವದಾನವಾಗಿ ಅರ್ಜಿ ನಮೂನೆಯನ್ನು ತಪ್ಪಿಲ್ಲದೇ ತುಂಬಿಸಿ
  • ಸ್ಪೀಡ್‌ಪೋಸ್ಟ್ ಸೇವೆಯ ಅಂಚೆ ಕಛೇರಿಗಳು
  • ಜಿಲ್ಲಾ ಪಾಸ್‌ಪೋರ್ಟ್ ಸೆಲ್‌ಗಳು (ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳ ಕಛೇರಿಯಲ್ಲಿ)
  • ಪಾಸ್‌ಪೋರ್ಟ್ ಅರ್ಜಿ ಸಂಗ್ರಹ ಕೇಂದ್ರ, ಮಂಗಳೂರು
ಪಾಸ್‌ಪೋರ್ಟ್ ಅರ್ಜಿಯನ್ನು ಸ್ವತಃ ಅರ್ಜಿದಾರರು ಅಥವಾ ಅರ್ಜಿದಾರರಿಂದ ನಿರ್ದೇಶಿತಗೊಂಡ ವ್ಯಕ್ತಿಯು (ಅಧಿಕಾರ ಪತ್ರದೊಂದಿಗೆ) ಸಲ್ಲಿಸಬಹುದು.

೪) ಶೀಘ್ರ ಪಾಸ್‌ಪೋರ್ಟ್- ವಿವರಗಳಿಗೆ ತತ್ಕಾಲ್ ವಿಭಾಗ ನೋಡಿ.

೫) ಶುಲ್ಕ ವಿವರ:- ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ.

೬) ತಪಶೀಲು ಪಟ್ಟಿ (ಚೆಕ್‌ಲಿಸ್ಟ್):- ಪಾಸ್‌ಪೋರ್ಟ್ ಅರ್ಜಿಯ ಜೊತೆ ಸಲ್ಲಿಸಬೇಕಾದ ದಾಖಲೆಗಳ ವಿವರಗಳಿಗೆ ತಪಶೀಲು ಪಟ್ಟಿ ವಿಭಾಗ ನೋಡಿ.

 ಪೀಠಿಕೆ

 ಕಛೇರಿ ವಿಳಾಸ

 ಕಛೇರಿ ಸಮಯ

 ರಜಾದಿನಗಳು

 ಕಾರ್ಯ ವ್ಯಾಪ್ತಿ

 ಕೌಂಟರ್ ವಿವರ

 ದೂರುಗಳು

 ಅರ್ಜಿಯ ಪ್ರಸ್ತುತ ಸ್ಥಿತಿ

 ಟೆಲಿ ವಿಚಾರಣೆ

 ವಿಲೇವಾರಿಯಾಗಿರುವ ಅರ್ಜಿಗಳು

 ನಿಮ್ಮ ಪೈಲ್ ಸಂಖ್ಯೆ-ಪತ್ತೆ ಮಾಡಿ

 ಅದಾಲತ್

 ಮಾಹಿತಿ ಹಕ್ಕು ಕಾಯ್ದೆ ಬೆಂಗಳೂರು

 ಬೆಂಗಳೂರು
ಓನ್ ಕೇಂದ್ರಗಳು

 ಶೀಘ್ರ ಅಂಚೆ
ಕೇಂದ್ರಗಳು

 ಜಿಲ್ಲಾವಾರು ಪಾಸ್‌ಪೋರ್ಟ್ ಘಟಕಗಳು

 ಮಾನ್ಯತೆ ಹೊಂದಿದ ಟ್ರಾವೆಲ್ ಏಜಂಟ್‌ಗಳು

 ಆವರ್ತಕ ಪ್ರಶ್ನೆಗಳು

Copyright 2008, Regional Passport Office This site is best viewed in 1024 x 768 resolution Hosted by National Informatics Center.