ಅರ್ಜಿ ನಮೂನೆಯನ್ನು ತುಂಬಲು ಸೂಚನೆಗಳು
|
(ಕಾಲಂ ಪ್ರಕಾರವಾಗಿ)
| ಅರ್ಜಿ ನಮೂನೆಯ ಆರಂಭದಲ್ಲಿ ಕೆಲವು ಚೌಕಟ್ಟುಗಳಿವೆ. ಇವುಗಳಲ್ಲಿ ನಿಮ್ಮ ಭಾವಚಿತ್ರ, ಸಹಿ, ಅಥವಾ ಹೆಬ್ಬಟ್ಟಿನ ಗುರುತನ್ನು ಮಾಡಬೇಕಾಗುತ್ತದೆ. ಪಾವತಿಸಿದ ಶುಲ್ಕದ ಮೊತ್ತವನ್ನು ಸರಿಯಾದ ಸ್ಥಳದಲ್ಲಿ ತುಂಬಿರಿ.
|
|
ನಿಮ್ಮ ಇತ್ತೀಚಿನ ೩ ಪಾಸ್‌ಪೋರ್ಟ್ ಅಳತೆಯ ವರ್ಣ ಭಾವಚಿತ್ರ ಬೇಕಾಗುತ್ತದೆ. ಒಂದು ಭಾವಚಿತ್ರವನ್ನು ಅರ್ಜಿ ನಮೂನೆಯ ಮೊದಲ ಪುಟದಲ್ಲಿ ಮತ್ತು ಇನ್ನೆರಡು ಭಾವಚಿತ್ರವನ್ನು ವೈಯುಕ್ತಿಕ ವಿವರಣೆ (ಪಿ.ಪಿ. ಫಾರಂ) ನಲ್ಲಿ ಅಂಟಿಸಿ. ಕಪ್ಪು/ಬಿಳುಪು, ಕಪ್ಪು/ವರ್ಣ ಕನ್ನಡಕ ಧರಿಸಿರುವ/ನಸುಗಪ್ಪು ಬಣ್ಣದ ಹಿನ್ನಳೆಯ/ಸಮವಸ್ತ್ರದ/ಪೊಲಾರೈಡ್/ಕಂಪ್ಯೂಟರ್ ಮುದ್ರಿತ ಭಾವಚಿತ್ರಗಳನ್ನು ಒಪ್ಪಿಕೊಳ್ಳಲಾಗುವುದಿಲ್ಲ. ವರ್ಣ ಭಾವಚಿತ್ರದ ಹಿನ್ನಲೆ ಸ್ಪಷ್ಟವಾಗಿರಬೇಕು. (ಬಿಳಿ ಬಣ್ಣದ ಹಿನ್ನಲೆಯು ಉತ್ತಮ) ಮತ್ತು ಭಾವಚಿತ್ರವು ಸಂಪೂರ್ಣ ಮುಖಚಹರೆಯನ್ನು ತೋರಿಸಬೇಕು. ಸಂಬಂಧಪಟ್ಟ ಚೌಕಟ್ಟಿನ ಒಳಗೆ ನಿಮ್ಮ ಇತ್ತೀಚಿನ 3.5 x 3.5 ಸೆ.ಮೀ. ಅಳತೆಯ ಭಾವಚಿತ್ರವನ್ನು ಅಂಟಿಸಿ. ಭಾವಚಿತ್ರವು ಚೌಕಟ್ಟಿನ ಅಳತೆಗೆ ಸರಿಯಾಗಿರಬೇಕು. ಮೊದಲ ಪುಟದ ಭಾವಚಿತ್ರದ ಮೇಲೆ ಸಹಿ ಹಾಕಬೇಡಿ. ವೈಯುಕ್ತಿಕ ವಿವರಣೆಯಲ್ಲಿನ ಭಾವಚಿತ್ರದ ಮೇಲೆ ಸಹಿ ಹಾಕಿರಿ.
|
|
ಸಹಿ ಮತ್ತು ಹೆಬ್ಬಟ್ಟಿನ ಗುರುತು ಸಂಬಂಧಪಟ್ಟ ಚೌಕಟ್ಟಿನ ರೇಖೆಗಳನ್ನು ಮೀರಬಾರದು. ಪುರುಷ/ಗಂಡು ಮಗುವಾದಲ್ಲಿ ಎಡಗೈ ಹೆಬ್ಬಟ್ಟು, ಮಹಿಳೆ/ಹೆಣ್ಣು ಮಗುವಾದಲ್ಲಿ ಬಲಗೈ ಹೆಬ್ಬಟ್ಟು ಗುರುತು ಒತ್ತಬೇಕು.
|
|
75 ಅಂಶಗಳ (ಆಂಗ್ಲ ವರ್ಣಮಾಲೆ) ವರೆಗಿನ ಹೆಸರನ್ನು ಕೊಡಬಹುದು. ಪಾಸ್‌ಪೋರ್ಟ್‌ನಲ್ಲಿ ಬರಬೇಕಾದ ಹೆಸರನ್ನು ಸ್ಪಷ್ಟವಾಗಿ ಬರೆಯಬೇಕು. ಉದಾಹರಣೆಗೆ:
|
ಹೆಸರು: 'Karur Vailunta Subramanyam Ramanathan Pillai' ಮೊದಲಿಗೆ ಪಿಳ್ಳೈ ಎಂಬ ಉಪನಾಮವನ್ನು surname ಗಾಗಿ ಕೊಡಲಾಗಿರುವ ಚೌಕಟ್ಟಿನಲ್ಲಿ ತುಂಬಿ ನಂತರ , ಚಿನ್ಹೆಯನ್ನು ಉಪಯೋಗಿಸಿ ನಂತರ ನಿಮ್ಮ ಹೆಸರನ್ನು Karur Vaikunta Subramanyam Ramanathan ಎಂದು ಉಳಿದ ಚೌಕಟ್ಟಿನಲ್ಲಿ ಬರೆಯಿರಿ. Zಮಗೆ ಉಪನಾಮ ಇಲ್ಲದೇ ಹೋದಲ್ಲಿ ಕೇವಲ ಹೆಸರನ್ನು ಮಾತ್ರ ಬರೆಯಿರಿ. ಯಾವುದೇ ಕಾರಣಕ್ಕೂ initial ಗಳನ್ನು ಬಳಸಬಾರದು. ಪೂರ್ತಿ ಹೆಸರನ್ನು ಬರೆಯಬೇಕು.
|
|
ನೀವು ನಿಮ್ಮ ಮೊದಲಿನ ಹೆಸರನ್ನು ಬದಲಾಯಿಸಿದಲ್ಲಿ ನಿಮ್ಮ ಮೊದಲಿನ ಹೆಸರನ್ನು ಪೂರ್ತಿಯಾಗಿ ಬರೆಯಿರಿ. ಇದು ವ್ಯಕ್ತಿ ತನ್ನ ಹೆಸರನ್ನು ಸ್ವಲ್ಪ ಬದಲಾಯಿಸಿದ್ದರೂ ಸಹ ಅನ್ವಯಿಸುತ್ತದೆ. ಮದುವೆಯಾದ ಮಹಿಳೆ ತನ್ನ ಹೆಸರನ್ನು ಮದುವೆಯ ನಂತರ ಬದಲಾಯಿಸಿಕೊಂಡಿದ್ದಲ್ಲಿ, ಮದುವೆಗೆ ಮೊದಲಿನ ಹೆಸರನ್ನು ಬರೆಯಬೇಕು. ಹೆಸರಿನ ಬದಲಾವಣೆ ಇಲ್ಲದಿದ್ದಲ್ಲಿ ಅನ್ವಯಿಸುವುದಿಲ್ಲ not applicable ಎಂದು ಬರೆಯಬೇಕು.
|
|
ನಿಮ್ಮ ಲಿಂಗವನ್ನು ಪುರುಷ (M) ಅಥವಾ ಮಹಿಳೆ (F) ಯಾವುದು ಅನ್ವಯವಾಗುವುದೋ ಅದನ್ನು ಸೂಚಿಸಿ.
|
|
ಹುಟ್ಟಿದ ದಿನಾಂಕ. ಹುಟ್ಟಿದ ದಿನಾಂಕವನ್ನು ಬಿಡಿಯಾಗಿ ಅಂಕಿಗಳಲ್ಲಿ ದಿನ/ತಿಂಗಳು/ವರ್ಷ ಮತ್ತು ಪದಗಳಲ್ಲಿ ನಿಮ್ಮ ಹುಟ್ಟಿದ ದಾಖಲೆ (ಪುರಸಭೆ ಅಥವಾ ಸರ್ಕಾರಿ ದಾಖಲೆ) ಯಲ್ಲಿ ಹೇಗಿದೆಯೋ ಹಾಗೆ ಬರೆಯಿರಿ. ಹುಟ್ಟಿದ ದಿನಾಂಕದ ದಾಖಲೆಯನ್ನು ಅವಶ್ಯವಾಗಿ ಕೊಡಲೇಬೇಕು. ಸಂಬಂಧಪಟ್ಟ ದಾಖಲೆಗಳ ಸೂಚಿ ಸೆಕ್ಷನ್ ೪ ರಲ್ಲಿ ಲಭ್ಯವಿರುತ್ತದೆ.
|
|
ಸ್ಥಳ ಮತ್ತು ಹುಟ್ಟಿದ ದೇಶ. ಭಾರತದಲ್ಲಿ ಜನಿಸಿದ್ದಾದಲ್ಲಿ ನೀವು ಹುಟ್ಟಿದ ಸ್ಥಳ ಅಂದರೆ ಹಳ್ಳಿ/ನಗರ/ಜಿಲ್ಲೆ/ರಾಜ್ಯ ಮತ್ತು ಭಾರತದ ಹೊರಗೆ ಜನಿಸಿದ್ದಾದಲ್ಲಿ ಹುಟ್ಟಿದ ಸ್ಥಳ ಮತ್ತು ದೇಶದ ಹೆಸರು ನಮೂದಿಸಬೇಕು. ಅರ್ಜಿದಾರರು ಭಾರತದ ವಿಭಜನೆಗೆ ಮೊದಲು ಈಗಿನ ಪಾಕಿಸ್ತಾನ ಅಥವಾ ಭಾಂಗ್ಲಾದೇಶದಲ್ಲಿನ ಸ್ಥಳದಲ್ಲಿ ಜನಿಸಿದ್ದಾದಲ್ಲಿ, ಆ ಸ್ಥಳದ ಹೆಸರು ಮತ್ತು ಅದರ ಹಿಂದೆ ದೇಶದ ಹೆಸರನ್ನು ಅವಿಭಜಿತ sರತ ಎಂದು ಬರೆಯಿರಿ.
|
|
ತಂದೆ/ತಾಯಿ ಮತ್ತು ಪತಿ/ಪತ್ನಿ ಹೆಸರನ್ನು ಸಂಬಂಧಪಟ್ಟ ಕಾಲಂನಲ್ಲಿ ನಮೂದಿಸಿ. ಉಪನಾಮ ಇದ್ದಲ್ಲಿ ಅವುಗಳನ್ನು ಪ್ರಥಮ ನಾಮದ ನಂತರ ಸಂಬಂಧಪಟ್ಟ ಕಾಲಂ ನಲ್ಲಿ ನಮೂದಿಸಿ. ಒಂದು ವೇಳೆ ಅರ್ಜಿದಾರರು ಮದುವೆಯಾಗಿಲ್ಲವಾದಲ್ಲಿ ಕಾಲಂ-೮ ರಲ್ಲಿ ಅನ್ವಯಿಸುವುದಿಲ್ಲnot applicable ಎಂದು ಬರೆಯಿರಿ.
|
|
ಅರ್ಜಿದಾರರು ತಾವು ನೆಲಸಿರುವ ವಿಳಾಸದ ಪೂರ್ತಿ ವಿವರ, ದೂರವಾಣಿ ಸಂಖ್ಯೆ, ಪಿನ್ ಕೋಡ್‌ಅನ್ನು ನೀಡಬೇಕು. ಜೊತೆಗೆ ಅರ್ಜಿದಾರರು ವಿಳಾಸದಲ್ಲಿ ನೆಲಸಿರುವ ಅವಧಿಯನ್ನು ಸ್ಪಷ್ಟವಾಗಿ ನೀಡಬೇಕು. ಮೊಬೈಲ್ ಸಂಖ್ಯೆ ಇದ್ದಲ್ಲಿ ಅದನ್ನು ನಮೂದಿಸಬೇಕು. ಅರ್ಜಿದಾರರು ಒಂದು ಪಕ್ಷ ವಿಳಾಸದಲ್ಲಿ ಒಂದು ವರ್ಷಕ್ಕಿಂತ ಕಡಿಮೆ ಅವಧಿಗೆ ನೆಲೆಸಿದ್ದಲ್ಲಿ ದಯವಿಟ್ಟು ಮೊದಲಿನ ವಿಳಾಸ ಅಥವಾ ವಿಳಾಸಗಳನ್ನು (ಒಂದಕ್ಕಿಂತ ಹೆಚ್ಚು ಇದ್ದಲ್ಲಿ) ಮತ್ತು ನೆಲಸಿದ್ದ ಅವಧಿಯನ್ನು ಕಾಲಂ-೧೦ ರಲ್ಲಿ ಬರೆಯಬೇಕು. ವಿದ್ಯಾರ್ಥಿಗಳು ಪಾಲಕರಿಂದ ದೂರ ನೆಲೆಸಿದ್ದಲ್ಲಿ ತಾವು ಓದುತ್ತಿರುವ ಸ್ಥಳದಲ್ಲಿಯೂ ಅರ್ಜಿ ಸಲ್ಲಿಸಬಹುದು. ಈ ರೀತಿಯ ಸಂದರ್ಭದಲ್ಲಿ ತಾವು ನೆಲೆಸಿರುವ ವಿಳಾಸದ ದಾಖಲೆ ಮತ್ತು ಓದುತ್ತಿರುವ ಶಾಲೆ/ಕಾಲೇಜು/ಸಂಸ್ಥೆಯ ಮುಖ್ಯಸ್ಥರಿಂದ ನಂಬಿಕಾರ್ಹತೆ (Bonafide) ಪ್ರಮಾಣಪತ್ರವನ್ನು ಸಲ್ಲಿಸಬೇಕು. ಒಂದಕ್ಕಿಂತ ಹೆಚ್ಚು ವಿಳಾಸದಲ್ಲಿ ನೆಲೆಸಿದ್ದಲ್ಲಿ ಪ್ರತ್ಯೇಕ ವೈಯುಕ್ತಿಕ ವಿವರಣೆ ಫಾರಂ ಅನ್ನು ತುಂಬಬೇಕು.
|
|
ಅರ್ಜಿದಾರರು ಮೊದಲು ಪಾಸ್‌ಪೋರ್ಟ್ ಪಡೆದಿದ್ದಲ್ಲಿ ಅದರ ವಿವರ ನೀಡಬೇಕು. ಪಾಸ್‌ಪೋರ್ಟ್ ಅಥವಾ ಪೈಲ್ ಸಂಖ್ಯೆಯನ್ನು ಮತ್ತು ಪಾಸ್‌ಪೋರ್ಟ್ ನೀಡಿಕೆಯ ದಿನಾಂಕ ಪಾಸ್‌ಪೋರ್ಟ್ ಪಡೆದ ಕಛೇರಿಯ ವಿವರವನ್ನು ಸಂಬಂಧಪಟ್ಟ ಚೌಕದಲ್ಲಿ ತುಂಬಬೇಕು. ಒಂದು ವೇಳೆ ಮೊದಲು ಪಾಸ್‌ಪೋರ್ಟ್‌ಗಾಗಿ ಅರ್ಜಿ ಸಲ್ಲಿಸಿದ್ದು ಮತ್ತು ಕಾರಣಾಂತರಗಳಿಂದ ಪಾಸ್‌ಪೋರ್ಟ್ ದೊರೆಯದಿದ್ದಲ್ಲಿ ಅರ್ಜಿ ಸಲ್ಲಿಕೆಯ ಪೈಲ್ ಸಂಖ್ಯೆ, ಅರ್ಜಿ ಸಲ್ಲಿಸಿದ್ದ ದಿನಾಂಕ ಮತ್ತು ಅರ್ಜಿ ಸಲ್ಲಿಕೆಯ ಕಛೇರಿ ಸ್ಥಳ ಇವುಗಳನ್ನು ತಪ್ಪದೇ ಬರೆಯಿರಿ. ದಯವಿಟ್ಟು ಗಮನಿಸಿ. ಸೆಕ್ಷನ್ ೧೨ ಪಾಸ್‌ಪೋರ್ಟ್ ಕಾಯ್ದೆ ಪ್ರಕಾರ ತಪ್ಪು ಮಾಹಿತಿ ನೀಡುವುದು, ವಸ್ತುಸ್ಥಿತಿಯನ್ನು ಮುಚ್ಚಿಡುವುದು, ದಂಡಾರ್ಹವಾಗಿರುತ್ತದೆ.
|
|
ಅರ್ಜಿದಾರರು ಎಂದಾದರೂ ಹೊರ ದೇಶದಿಂದ ಭಾರತೀಯ ಧೂತಾವಾಸ ಕಛೇರಿಯಿಂದ ನೀಡಲಾಗುವ ತುರ್ತು ಪ್ರಮಾಣಪತ್ರ (Emergency Certificate/Out pass) ಮೂಲಕ ಭಾರತಕ್ಕೆ ವಾಪಸ್ಸು ಬಂದಿದ್ದಲ್ಲಿ ಅಥವಾ ಹೊರದೇಶದಿಂದ ಭಾರತಕ್ಕೆ ಗಡಿಪಾರು ಆಗಿದ್ದಲ್ಲಿ ಅದರ ಸಂಪೂರ್ಣ ವಿವರಣೆ, ದಾಖಲೆ, ಸ್ಥಳ ಮತ್ತು ದೇಶದ ಹೆಸರು ಇವುಗಳನ್ನು ಈ ಕಾಲಂನಲ್ಲಿ ಬರೆಯಬೇಕು. ಒಂದು ವೇಳೆ ತುರ್ತು ಪ್ರಮಾಣಪತ್ರದ ವಿವರ ಇಲ್ಲದಿದ್ದಲ್ಲಿ ಕನಿಷ್ಟ ಸ್ಥಳ ಮತ್ತು ದೇಶದ ಹೆಸರನ್ನು ನಮೂದಿಸಲೇಬೇಕು. ಜೊತೆಗೆ ಪಾಸ್‌ಪೋರ್ಟ್ ಕಳೆದುಹೋದ ಹಿನ್ನಲೆ ಮತ್ತು ತುರ್ತು ಪ್ರಮಾಣಪತ್ರ ಪಡೆಯಲು ಕಾರಣವಾದ ಪ್ರಸಂಗದ ಸಂಪೂರ್ಣ ವಿವರಣೆಯನ್ನು ನೋಟರಿ ಪ್ರಮಾಣಪತ್ರದ ರೂಪದಲ್ಲಿ ಸಲ್ಲಿಸಬೇಕು.
|
|
ವಿದ್ಯಾರ್ಹತೆ ದಾಖಲೆ ವಿವರ, ಗೋಚರವಾಗುವ ದೈಹಿಕ ಗಮನೀಯ ಗುರುತು, ಎತ್ತರ ಸೆಂಟೀಮೀಟರ್‌ನಲ್ಲಿ ಇವುಗಳನ್ನು ನಮೂದಿಸಬೇಕು.
|
|
ಹೌದು (Yes) ಅಥವಾ ಇಲ್ಲ (No) ಎಂದು ಬರೆಯಬೇಕು. ಕೇಂದ್ರ/ರಾಜ್ಯ/ಸರ್ಕಾರಿ ಸಾರ್ವಜನಿಕ ಉದ್ದಿಮೆಗಳಲ್ಲಿ ಕೆಲಸ ಮಾಡುತ್ತಿದ್ದಲ್ಲಿ ಗುರುತಿನ ಪತ್ರ (Identity certificate) ಅನ್ನು ಸಂಬಂಧಪಟ್ಟ ಕಛೇರಿಯಿಂದ ಪಡೆದು ಅರ್ಜಿಂii ಜೊತೆ ಲಗತ್ತಿಸಬೇಕು. ಇದರ ನಮೂನೆ ಅನುಬಂಧ-ಬಿ (Annexure-B) ನಲ್ಲಿ ಲಭ್ಯವಿರುತ್ತದೆ.
|
|
ಪೌರತ್ವದ ವಿವರಣೆ- ಹುಟ್ಟಿನಿಂದಲೇ (by birth)/ಅವತರಣೆ (By decesent)/ ದಾಖಲಾತಿ (Registration) /ನೈಸರ್ಗಿಕರಣ (Naturalization) ಎಂಬುದನ್ನು ಚೌಕಟ್ಟಿನಲ್ಲಿ B/D/R/N ಎಂದು ಬರೆಯಬೇಕು. ಭಾರತದ ಪೌರತ್ವ ಹೊಂದುವ ಮೊದಲು ಇನ್ಯಾವುದೇ ದೇಶದ ಪೌರತ್ವ ಹೊಂದಿದ್ದಲ್ಲಿ ಅದರ ವಿವರಣೆಯನ್ನು ಖಾಲಿ ಚೌಕಟ್ಟಿನ ಜಾಗದಲ್ಲಿ ಬರೆಯಿರಿ.
|
|
ಹೌದು (Yes) ಅಥವಾ ಇಲ್ಲ (No) ಎಂದು ಬರೆಯಬೇಕು. ಇ.ಸಿ.ಆರ್ ಎಂದು ಪರಿಗಣಿತವಾದ ಪಾಸ್‌ಪೋರ್ಟ್ ಹೊಂದಿರುವ ಭಾರತೀಯ ನಾಗರೀಕರು ನೌಕರಿಯ ಉದ್ದೇಶಕ್ಕಾಗಿ ಭಾರತ ಬಿಡುವ ಮೊದಲು ವಲಸಿಗ ರಕ್ಷಣಾ ಮಹಾನಿರೀಕ್ಷಕರು (Protector General of Emigrants) ಇವರಿಂದ ಅನುಮತಿ ಪಡೆಯಬೇಕಾಗುತ್ತದೆ. ನೌಕರೇತರ ಉದ್ದೇಶಕ್ಕಾಗಿ ಪ್ರಯಾಣ ಮಾಡುತ್ತಿದ್ದಲ್ಲಿ ಅನುಮತಿ ಅಗತ್ಯ ಇರುವುದಿಲ್ಲ. ದಯವಿಟ್ಟು ಗಮನಿಸಿ. ಇ.ಸಿ.ಆರ್ ಮುದ್ರೆ (ECR) ಅನ್ವಯವಾಗುವ ಪಾಸ್‌ಪೋರ್ಟ್‌ನಲ್ಲಿ ಮಾತ್ರ ಇರುತ್ತದೆ. ಒಂದು ವೇಳೆ ಇ.ಸಿ.ಆರ್ ಮುದ್ರೆ ಇಲ್ಲದಿದ್ದಲ್ಲಿ ಇ.ಸಿ.ಎನ್.ಆರ್ (ECNR) ನೀಡಲಾಗಿದೆ ಎಂದೇ ಪರಿಗಣಿಸಬೇಕು. ಪ್ರತ್ಯೇಕವಾದ ಇ.ಸಿ.ಎನ್.ಆರ್ ಮುದ್ರೆಯನ್ನು ಹಾಕಲಾಗುವುದಿಲ್ಲ.
|
ಕೆಳಕಂಡ ವರ್ಗದ ಅರ್ಜಿದಾರರು ಇ.ಸಿ.ಎನ್.ಆರ್.ಗೆ ಅರ್ಹರಾಗಿರುತ್ತಾರೆ.
|
- ರಾಜತಾಂತ್ರಿಕ ಮತ್ತು ಅಧಿಕೃತ ಪಾಸ್‌ಪೋರ್ಟ್ ಹೊಂದಿರುವವರು
- ರಾಜ್ಯ ಪತ್ರಾಂಕಿತ ಸರ್ಕಾರಿ ನೌಕರರು
- ವೈಯಕ್ತಿಕ ತೆರಿಗೆ ಪಾವತಿದಾರರು (ಕೃಷಿ ತೆರಿಗೆದಾರರನ್ನು ಒಳಗೊಂಡು) ಆದಾಯ ತೆರಿಗೆ ನಿರ್ಧಾರಣ ದಾಖಲೆ ಮತ್ತು ಹಿಂದಿನ ಒಂದು ವರ್ಷದ ಆದಾಯ ತೆರಿಗೆ ಪಾವತಿಸಿರುವ ದಾಖಲೆ ಅಥವಾ ಪ್ಯಾನ್ ಕಾರ್ಡ್‌ನ ಪ್ರತಿಯನ್ನು
- ವೃತ್ತಿ ಪದವಿ ಹೊಂದಿರುವವರು ಅಂದರೆ ಎಂಬಿಬಿಎಸ್ ಪದವಿ ಹೊಂದಿರುವ ವೈದ್ಯರು, ಅಥವಾ ಸಮಾನಾಂತರ ಆಯುರ್ವೇದ ಹೋಮಿಯೋಪತಿ ವೈದ್ಯ ಪದ ಹೊಂದಿರುವವರು, ಮಾನ್ಯತೆ ಹೊಂದಿದ ಪತ್ರಕರ್ತರು, ಇಂಜಿನೀಯರ್‌ಗಳು, ಲೆಕ್ಕಪತ್ರ (Charted Accountants), ಮೌಲ್ಯ ಲೆಕ್ಕ ಪತ್ರದಾರರು, ಲೆಕ್ಚರರ್‌ಗಳು, ಉಪಾದ್ಯಾಯರು, ವಿಜ್ಞಾನಿಗಳು, ವಕೀಲರು ಇತ್ಯಾದಿ.
- ಬಿ ಯಿಂದ ಡಿ ವರೆಗಿನ ವ್ಯಕ್ತಿಗಳ ಸಂಗಾತಿಗಳು ಮತ್ತು ಅವರ ಅವಲಂಬಿತ ಮಕ್ಕಳು.
- ಮೆಟ್ರಿಕ್ಯುಲೇಷನ್ (ಎಸ್.ಎಸ್.ಎಲ್.ಸಿ) ಅಥವಾ ಅದಕ್ಕಿಂತ ಮೇಲ್ಪಟ್ಟ ವಿದ್ಯಾರ್ಹತೆ ಹೊಂದಿರುವ ಎಲ್ಲರೂ.
- ಸಿ.ಡಿ.ಸಿ. ಪ್ರಮಾಣಪತ್ರ ಹೊಂದಿರುವ ನೌಕಾಯಾನಿಗಳು/ಸಾಗರ ಕೆಡೆಟ್‌ಗಳು, ಡೆಕ್ ಕೆಡೆಟ್‌ಗಳು
- ಎಸ್. ಚಾಣಕ್ಯ (T.S. Chanakya) ಮುಂಬಯಿ ಇಲ್ಲಿ ಮೂರು ವರ್ಷಗಳ ಬಿ.ಎಸ್ಸಿ ಪದವಿಯಲ್ಲಿ ತೇರ್ಗಡೆ ಹೊಂದಿರುವವರು.
- ಸರ್ಕಾರದಿಂದ ಮಾನ್ಯತೆ ಪಡೆದ ತರಬೇತಿ ಸಂಸ್ಥೆಗಳಲ್ಲಿ (ಟಿ.ಎಸ್. ಚಾಣಕ್ಯ, ಟಿ.ಎಸ್. ರಹಮಾನ್, ಟಿ.ಎಸ್. ಜವಾಹರ್, ಎಂ.ಟಿ.ಐ (MTI) ಎಸ್.ಸಿ.ಐ (SCI) ಮತ್ತು ಎನ್.ಐ.ಪಿ.ಎಂ. ಚನ್ನೈ) ಮೂರು ತಿಂಗಳ ಸಮುದ್ರ ಪೂರ್ವೇತರ ತರಬೇತಿ ಹೊಂದಿದ್ದವರು-ಶಿಪ್ಪಿಂಗ್ ಮಾಸ್ಟರ್(ಮುಂಬಯಿ, ಕೊಲ್ಕತ್ತ, ಚನ್ನೈ) ನಿಂದ ನೀಡಲಾಗುವ ಗುರುತಿನ ಚೀಟಿಯ ಪ್ರತಿಯನ್ನು ನೀಡಬೇಕು.
- ಖಾಯಂ ವಲಸೆ ವೀಸಾ ಹೊಂದಿರುವವರು (ಯು.ಕೆ, ಯು.ಎಸ್.ಎ, ಆಸೇಲಿಯಾದ ವೀಸಾಗಳು)
- ರಾಷೀಯ ವೃತ್ತಿಪರ ತರಬೇತಿ ಕೌನ್ಸಿಲ್ (National Council for Vocational Training) ಅಥವಾ ರಾಜ್ಯ ವೃತ್ತಿಪರ ತರಬೇತಿ ಕೌನ್ಸಿಲ್ (State Council of Vocational Training) ನ ಎರಡು ವರ್ಷದ ಡಿಪ್ಲೊಮಾ ಹೊಂದಿರುವವರು ಅಥವಾ ಮೂರು ವರ್ಷದ ಡಿಪ್ಲೊಮಾ/ತತ್ಸಮಾನ ಪಾಲಿಟೆಕ್ನಿಕ್ ಪದವಿ-ಸರ್ಕಾರದಿಂದ ಮಾನ್ಯತೆ ಹೊಂದಿರುವ ಪಾಲಿಟೆಕ್ನಿಕ್‌ಗಳಿಂದ.
- ಭಾರತ ನರ್ಸಿಂಗ್ ಕೌನ್ಸಿಲ್ ಕಾಯ್ದೆ-೧೯೪೭ ಅನುಸಾರ ಅರ್ಹತೆ ಹೊಂದಿರುವ ನರ್ಸುಗಳು
- ಐವತ್ತು ವರ್ಷ ಮೀರಿದ ಎಲ್ಲಾ ವ್ಯಕ್ತಿಗಳು
- ಕನಿಷ್ಟ ಮೂರು ವರ್ಷ ಹೊರದೇಶದಲ್ಲಿ ವಾಸ ಮಾಡಿರುವ (ಸತತವಾಗಿ ಅಥವಾ ಸತತವಲ್ಲದ) ವ್ಯಕ್ತಿಗಳು ಮತ್ತು ಅವರ ಸಂಗಾತಿಗಳು
- ೧೮ ವರ್ಷ ಮೀರದ ಮಕ್ಕಳು (೧೮ ವರ್ಷದ ಪುನರ್ ನೀಡಿಕೆ ಸಂದರ್ಭದಲ್ಲಿ ಅವಶ್ಯವಿದ್ದಲ್ಲಿ ಇ.ಸಿ.ಆರ್ ಮುದ್ರೆ ಹಾಕಲಾಗುವುದು)
- ಬಾಂಗ್ಲಾದೇಶ, ಪಾಕಿಸ್ತಾನ, ಯುರೋಪ್‌ನ (ಸಿ.ಐ.ಎಸ್ ರಾಷಗಳನ್ನು ಹೊರತುಪಡಿಸಿ) ಎಲ್ಲಾ ರಾಷಗಳು, ಉತ್ತರ ಅಮೇರಿಕಾ, ಆಸೇಲಿಯಾ, ಜಪಾನ್, ದಕ್ಷಿಣ ಕೊರಿಯಾ, ದಕ್ಷಿಣ ಆಪ್ರಿಕಾ ಮತ್ತು ಸಿಂಗಪುರ ರಾಷಗಳಿಗೆ ವಲಸೆ ಅನುಮತಿ ಅಗತ್ಯವಿರುವುದಿಲ್ಲ. ಅರ್ಹ ವರ್ಗದ ವಿವರವನ್ನು ಈ ಕಾಲಂನ ಖಾಲಿ ಭಾಗದಲ್ಲಿ ಬರೆಯಬೇಕು ಮತ್ತು ಸಂಬಂಧಪಟ್ಟ ದಾಖಲೆಗಳನ್ನು ಪಾಸ್‌ಪೋರ್ಟ್ ಅರ್ಜಿಯ ಜೊತೆ ಲಗತ್ತಿಸಬೇಕು.
ದಯವಿಟ್ಟು ಗಮನಿಸಿ. ಇ.ಸಿ.ಆರ್ ಮುದ್ರೆ ಹೊಂದಿರುವ ಪಾಸ್‌ಪೋರ್ಟ್‌ದಾರರು ಉದ್ಯೋಗೇತರ ಉದ್ದೇಶಗಳಿಗೆ ಉದಾಹರಣೆಗೆ ಪ್ರವಾಸ-ಆ ದೇಶದ ವೀಸಾ ಅಥವಾ ಹಿಂತಿರುಗುವ ಪ್ರಯಾಣದ ಟಿಕೆಟ್ ಇದ್ದಲ್ಲಿ, ಪ್ರಯಾಣ ಮಾಡಬಹುದು. ಉದ್ಯೋಗಕ್ಕಾಗಿ ಹೋಗುತ್ತಿದ್ದಲ್ಲಿ ವಲಸಿಗ ರಕ್ಷಣಾ ಮಹಾನಿರೀಕ್ಷಕರು (Protector General of Emigrants) ಇವರಿಂದ ಅನುಮತಿ ಪಡೆಯಬೇಕು. ಹಾಗಾಗಿ ಅರ್ಜಿದಾರರು ಪಾಸ್‌ಪೋರ್ಟ್ ಅರ್ಜಿ ತುಂಬುವ ಸಂದರ್ಭದಲ್ಲಿ ಇ.ಸಿ.ಎನ್.ಆರ್.ಗೆ ಅರ್ಹರಾಗಿದ್ದಲ್ಲಿ ಹೌದು ಎಂದು ಬರೆಯಬೇಕಾಗಿ ವಿನಂತಿ.
|
|
ಪ್ರಥಮ ಬಾರಿಗೆ ಅಪ್ರಾಪ್ತ ಮಕ್ಕಳಿಗೆ (೧೮ ವರ್ಷಕ್ಕಿಂತೆ ಕಡಿಮೆ ಇದ್ದಲ್ಲಿ) ಅರ್ಜಿ ಸಲ್ಲಿಸುತ್ತಿದ್ದಲ್ಲಿ, ಪೋಷಕರ ಅಥವಾ ಓರ್ವ ಪೋಷಕರ ಚಾಲ್ತಿ ಪಾಸ್‌ಪೋರ್ಟ್‌ನ ವಿವರ ನೀಡಬೇಕು. ಈ ಬಗ್ಗೆ ಸನ್ನಿವೇಶದಲ್ಲಿ ಅಪ್ರಾಪ್ತ ಮಕ್ಕಳಿಗೆ ಪೋಲೀಸ್ ಪರಿಶೀಲನೆ ಅಗತ್ಯವಿರುವುದಿಲ್ಲ. ಒಂದು ವೇಳೆ ಪೋಷಕರ ಬಳಿ ಪಾಸ್‌ಪೋರ್ಟ್ ಇಲ್ಲದಿದ್ದಲ್ಲಿ ಅಪ್ರಾಪ್ತ ಮಕ್ಕಳ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಪಾಸ್‌ಪೋರ್ಟ್ ಮಾಹಿತಿ ಕೈಪಿಡಿ-ಪ್ಯಾರಾ ಸಿ (ಬಿ)/ಸೆಕ್ಷನ್ ೪ ನೀಡಿರುವ ದಾಖಲೆಗಳಲ್ಲಿ ಕನಿಷ್ಟ ಮೂರು ದಾಖಲೆ ಮತ್ತು ಅನುಬಂಧ-ಐ ಪ್ರಮಾಣಪತ್ರದೊಂದಿಗೆ ಸಲ್ಲಿಸಬೇಕು. ಈ ಬಗೆಯ ಸನ್ನಿವೇಶದಲ್ಲಿ ಪಾಸ್‌ಪೋರ್ಟ್ ಅನ್ನು ಪೋಲೀಸ್ ವಿಚಾರಣೆ ಬಾಕಿ ಇರಿಸಿ ನೀಡಲಾಗುವುದು. ಅಪ್ರಾಪ್ತ ಮಕ್ಕಳ ಪಾಸ್‌ಪೋರ್ಟ್‌ನ ಅರ್ಜಿಯೊಂದಿಗೆ ಪಾಲಕರ ಘೋಷಣಾ ಪತ್ರ (ಅನುಬಂಧ-ಹೆಚ್)-ಸಾಮಾನ್ಯ ಹಾಳೆಯಲ್ಲಿ ತುಂಬಲೇಬೇಕು. ಅಪ್ರಾಪ್ತ ಅರ್ಜಿದಾರನ ವಯಸ್ಸು ೧೫ ರಿಂದ ೧೮ರ ಮಧ್ಯೆ ಇದ್ದು ಅರ್ಜಿದಾರನು ೧೦ ವರ್ಷದ ಅವಧಿಯ ಪಾಸ್‌ಪೋರ್ಟ್ ಬಯಸಿದಲ್ಲಿ ಅನುಬಂಧ-ಐ ಪ್ರಮಾಣಪತ್ರ ಮತ್ತು ಪಾಸ್‌ಪೋರ್ಟ್ ಮಾಹಿತಿ ಕೈಪಿಡಿಯ ಪ್ಯಾರಾ (ಬಿ)/ಸೆಕ್ಷನ್ ೪ ನೀಡಿರುವ ದಾಖಲೆಗಳಲ್ಲಿ ಕನಿಷ್ಟ ಮೂರು ದಾಖಲೆಗಳನ್ನು ನೀಡಬೇಕು. ೧೦ ವರ್ಷ ಅವಧಿಯ ಪಾಸ್‌ಪೋರ್ಟ್ ಶುಲ್ಕ ರೂ. ೧೦೦೦.೦೦ ಆಗಿರುತ್ತದೆ. ೧೫ ವರ್ಷಕ್ಕಿಂತ ಕೆಳಗಿನ ಅರ್ಜಿದಾರರಿಗೆ ಪಾಸ್‌ಪೋರ್ಟ್‌ಅನ್ನು ೫ ವರ್ಷ ಸೀಮಿತ ಅವಧಿಗೆ ಅಥವಾ ೧೮ ವರ್ಷದವರೆಗೆ (ಯಾವುದು ಕಡಿಮೆಯೋ) ನೀಡಲಾಗುವುದು. ಒಂದು ವೇಳೆ ಅಪ್ರಾಪ್ತ ಮಗು/ಬಾಲಕ/ಬಾಲಕಿ ಕೇವಲ ಓರ್ವ ಪಾಲಕರ ಪೋಷಣೆಯಲ್ಲಿ ಬೆಳೆಯುತ್ತಿದ್ದರೆ ಅಥವಾ ಪಾಲಕರು ನ್ಯಾಯಬದ್ದವಾಗಿ ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದರೆ, ಪಾಸ್‌ಪೋರ್ಟ್ ಅರ್ಜಿಯ ಜೊತೆಗೆ ನ್ಯಾಯಾದೀಶರ ಮುಂದೆ ಪ್ರಮಾಣ ಮಾಡಿದ ಅನುಬಂಧ-ಸಿ ಪ್ರಮಾಣಪತ್ರ ಮತ್ತು ಅಗತ್ಯ ದಾಖಲೆ (ವಿಚ್ಛೇದನ ಪತ್ರ) ಗಳನ್ನು ನೀಡಬೇಕು. ಸಾಮಾನ್ಯ ಸನ್ನಿವೇಶಗಳಲ್ಲಿ ಪಾಲಕರ ಘೋಷಣಾ ಪತ್ರ ಅನುಬಂಧ-ಹೆಚ್ ಅನ್ನು ತಪ್ಪದೇ ನೀಡಬೇಕು. ಒಂದು ವೇಳೆ ಕಾರಣಾಂತರಗಳಿಂದ ಓರ್ವ ಪಾಲಕರ ಸಹಿ/ಅನುಮತಿ ಪಡೆಯಲು ಆಗದಿದ್ದಲ್ಲಿ ಅರ್ಜಿ ಸಲ್ಲಿಸುತ್ತಿರುವ ಪಾಲಕ (ತಂದೆ/ತಾಯಿ) ವಸ್ತುಸ್ಥಿತಿ ಮತ್ತು ಸಹಿ/ಅನುಮತಿ ತೆಗೆದುಕೊಳ್ಳಲು ಆಗದೇ ಇರುವ ಕಾರಣವನ್ನು ಅನುಬಂಧ-ಜಿ ಪ್ರಮಾಣಪತ್ರದಲ್ಲಿ ವಿವರಿಸಿ ನೀಡಬೇಕು. ಒಂದು ವೇಳೆ ಅಪ್ರಾಪ್ತ ಮಗು/ಬಾಲಕ/ಬಾಲಕಿಗೆ ಪಾಸ್‌ಪೋರ್ಟ್ ನೀಡಿಕೆಯಿಂದ ಭವಿಷ್ಯದಲ್ಲಿ ಉಂಟಾಗಬಹುದಾದ ಕಾನೂನು ತೊಡಕು/ಕೋರ್ಟ್ ಕೇಸ್‌ಗಳಿಗೆ ತಾನೇ ಜವಾಬ್ದಾರನೆಂದು, ಪಾಸ್‌ಪೋರ್ಟ್ ಕಛೇರಿಯ ಹೊಣೆಗಾರಿಕೆ ಇಲ್ಲವೆಂದು ಸ್ಪಷ್ಟವಾಗಿ ಬರೆಯಬೇಕು. ಈ ರೀತಿಯ ಸಂದರ್ಭದಲ್ಲಿ ಪಾಲಕ (ತಂದೆ/ತಾಯಿ) ಮಗುವನ್ನು ಪಾಸ್‌ಪೋರ್ಟ್ ಕಛೇರಿಯ ಮನವಿಯ ಮೇರೆಗೆ ಹಾಜರುಪಡಿಸಬೇಕಾಬಹುದು.
|
|
ಅರ್ಜಿದಾರರು ಸರಿಯಾದ ಮಾಹಿತಿಯನ್ನು ನೀಡಲೇಬೇಕು. ವಸ್ತುಸ್ಥಿತಿಯನ್ನು ಮರೆಮಾಚುವುದರಿಂದ ಅರ್ಜಿದಾರರು ಪಾಸ್‌ಪೋರ್ಟ್ ಕಾಯ್ದೆ ೧೯೬೭ (ಮತ್ತದರ ತಿದ್ದುಪಡಿಗಳು) ಪ್ರಕಾರ ದಂಡ ತೆರಬೇಕಾಗಿಬರಬಹುದು.
|
|
ಅರ್ಜಿದಾರರು ತಮ್ಮ ಸಮೀಪದ ವ್ಯಕ್ತಿಯ ವಿಳಾಸ, ದೂರವಾಣಿ, ಮೊಬೈಲ್ ಈ-ಮೇಲ್ ವಿಳಾಸಗಳನ್ನು ನೀಡಲೇಬೇಕು. ತುರ್ತು ಸಂದರ್ಭದಲ್ಲಿ ಮಾಹಿತಿಯನ್ನು ನೀಡಲು ಇದು ಅವಶ್ಯಕವಾಗಿರುತ್ತದೆ.
|
|
ಈ ಕಾಲಂನಲ್ಲಿ ಅರ್ಜಿದಾರನು ಭಾರತದ ಸಾರ್ವಭೌಮತ್ವ, ಸಮಗ್ರತೆ, ಏಕತೆಗೆ ನಿಷ್ಟೆಯಿಂದ ಇರುವೆನೆಂದು ಮತ್ತು ಬೇರೆ ಯಾವುದೇ ರಾಷದ ಪೌರತ್ವ ಅಥವಾ ಪ್ರಯಾಣದ ದಸ್ತಾವೇಜನ್ನು ಸ್ವಯಂಪ್ರೇರಿತವಾಗಿ ಪಡೆಯುವುದಿಲ್ಲವೆಂದು ಘೋಷಿಸಬೇಕು. ಜೊತೆಗೆ ಈ ಕಾಲಂನಲ್ಲಿ ಅರ್ಜಿದಾರನು ಅರ್ಜಿಯಲ್ಲಿ ನೀಡಿರುವ ಮಾಹಿತಿಯೆಲ್ಲವೂ ಸತ್ಯವೆಂದು, ಮತ್ತು ತಪ್ಪು ಮಾಹಿತಿ ನೀಡುವುದು ಅಥವಾ ಮಾಹಿತಿ ಮರೆಮಾಚುವುದು ಪಾಸ್‌ಪೋರ್ಟ್ ಕಾಯ್ದೆ ೧೯೬೭ (ಮತ್ತದರ ತಿದ್ದುಪಡಿಗಳು) ಪ್ರಕಾರ ತಪ್ಪೆಂದು ಪರಿಗಣಿತವಾಗುವುದೆಂಬ ವಿಷಯ ತಿಳಿದಿದೆಯೆಂದು ಘೋಷಿಸಬೇಕು. ಅರ್ಜಿದಾರನು ಮತ್ಯಾವುದೇ ಪಾಸ್‌ಪೋರ್ಟ್ ಅಥವಾ ಪ್ರಯಾಣದ ದಸ್ತಾವೇಜನ್ನು ಹೊಂದಿಲ್ಲವೆಂದು ಘೋಷಿಸಬೇಕು. ಈ ಕಾಲಂನ ಕೆಳಗೆ ಕೊಟ್ಟಿರುವ ಚೌಕಟ್ಟಿನಲ್ಲಿ ಸಹಿ ಅಥವಾ ಹೆಬ್ಬಟ್ಟಿನ ಗುರುತನ್ನು (ಪುರುಷ/ಗಂಡು ಮಗುವಾದಲ್ಲಿ ಎಡಗೈ ಹೆಬ್ಬಟ್ಟು, ಮಹಿಳೆ/ಹೆಣ್ಣು ಮಗುವಾದಲ್ಲಿ ಬಲಗೈ ಹೆಬ್ಬಟ್ಟು) ನೀಡಬೇಕು. ದಿನಾಂಕ ಮತ್ತು ಸ್ಥಳವನ್ನು ನಮೂದಿಸಬೇಕು.
|
|
ಈ ಕಾಲಂನಲ್ಲಿ ನೀವು ಲಗತ್ತಿಸಿರುವ ದಾಖಲೆಗಳನ್ನು ಪಟ್ಟಿ ಮಾಡಬೇಕು. ದಾಖಲೆಗಳ ಜೆರಾಕ್ಸ್ ಪ್ರತಿಯನ್ನು ತಮ್ಮ ಸಹಿಯೊಂದಿಗೆ ಸ್ವ-ದೃಢೀಕರಿಸಬೇಕು.
|