| ಸರದಿ-ರಹಿತ ಪಾಸ್‌ಪೋರ್ಟ್ ನೀಡಿಕೆ (ತತ್ಕಾಲ್ ಯೋಜನೆ) |
ಅರ್ಜಿದಾರರು ತತ್ಕಾಲ್ ಯೋಜನೆಯಡಿ ಪಾಸ್‌ಪೋರ್ಟ್ ಬಯಸಿದಲ್ಲಿ ಅನುಬಂಧ-ಎಫ್‌ನ ಪರಿಶೀಲನಾ ಪ್ರಮಾಣಪತ್ರ ಮತ್ತು ಅನುಬಂಧ-ಐ ನ ಪ್ರಮಾಣಪತ್ರ ಹಾಗೂ ತತ್ಕಾಲ್ ಶುಲ್ಕವನ್ನು ಪಾವತಿಸಬೇಕು. ಪಾಸ್‌ಪೋರ್ಟ್ ನೀಡಿಕೆ ಪ್ರಾಧಿಕಾರ ಪರಿಶೀಲನಾ ಪ್ರಮಾಣಪತ್ರದ ಪರಿಶೀಲನೆ ಹಕ್ಕನ್ನು ಕಾಯ್ದುಕೊಂಡಿರುತ್ತದೆ. ಅಗತ್ಯವಿದ್ದ ಪ್ರಕರಣಗಳಲ್ಲಿ ಪಾಸ್‌ಪೋರ್ಟ್ ಕಛೇರಿಯು ಪರಿಶೀಲನಾ ಪ್ರಮಾಣಪತ್ರ ನೀಡಿರುವ ಅಧಿಕಾರಿಯನ್ನು ಪ್ರಮಾಣಪತ್ರದ ನೈಜ್ಯತೆಯ ಬಗ್ಗೆ ಪತ್ರ ಮುಖೇನ ವಿಚಾರಿಸಬಹುದು. ತತ್ಕಾಲ್ ಯೋಜನೆಯಲ್ಲಿ ಪಾಸ್‌ಪೋರ್ಟ್ ಬಯಸುವ ಅರ್ಜಿದಾರರು ತಮ್ಮ ಅರ್ಜಿ, ದಾಖಲೆಗಳು, ವರ್ಣ ಭಾವಚಿತ್ರ ಮತ್ತು ಅಗತ್ಯವಿರುವ ತತ್ಕಾಲ್ ಶುಲ್ಕವನ್ನು ಪಾವತಿಸಬೇಕು. ಪಾಸ್‌ಪೋರ್ಟ್ ಶೀಘ್ರದಲ್ಲಿ ಬೇಕಾಗಿರುವ ಕಾರಣಗಳನ್ನು ನೀಡಬೇಕಿಲ್ಲ. ಪಾಸ್‌ಪೋರ್ಟ್ ನೀಡಿದ ನಂತರ ಪೋಲೀಸ್ ವಿಚಾರಣೆಯನ್ನು ಮಾಡಲಾಗುತ್ತದೆ.
|
ತತ್ಕಾಲ್ ಯೋಜನೆಯಲ್ಲಿ ಕೆಳಕಂಡ ೧೫ ದಾಖಲೆಗಳಲ್ಲಿ ಕನಿಷ್ಟ ಮೂರು ದಾಖಲೆಗಳನ್ನು ಅನುಬಂಧ-ಐ ಪ್ರಮಾಣಪತ್ರ ನೀಡಿಯೂ ಪಾಸ್‌ಪೋರ್ಟ್ ಪಡೆಯಬಹುದು. ಈ ಮೂರು ದಾಖಲೆಗಳಲ್ಲಿ ಕನಿಷ್ಟ ಒಂದಾದರೂ ಭಾವಚಿತ್ರವನ್ನು ಒಳಗೊಂಡ ದಾಖಲೆ ಮತ್ತು ಕನಿಷ್ಟ ಒಂದಾದರೂ ಎ ಯಿಂದ ಐ ವರೆಗಿನ ದಾಖಲೆಯಾಗಿರಬೇಕು.
|
| ಎ) ಚುನಾವಣಾ ಗುರುತಿನ ಚೀಟಿ |
| ಬಿ) ಸರ್ಕಾರದಿಂದ ನೀಡಲ್ಪಟ್ಟ ಸೇವಾ ಗುರುತಿನ ಚೀಟಿ, ಸಾರ್ವಜನಿಕ ಉದ್ದಿಮೆಗಳ ಸೇವಾ ಗುರುತಿನ ಚೀಟಿ, ಸ್ಥಳೀಯ ಸಂಸ್ಥೆ ಅಥವಾ ಸಾರ್ವಜನಿಕ ನಿಯಮಿತ ಸಂಸ್ಥೆಗಳಿಂದ ನೀಡಲ್ಪಟ್ಟ ಸೇವಾ ಗುರುತಿನ ಚೀಟಿ |
| ಸಿ) ಎಸ್.ಸಿ/ಎಸ್.ಟಿ/ಓ.ಬಿ.ಸಿ. ಪ್ರಮಾಣಪತ್ರ |
| ಡಿ) ಸ್ವಾತಂತ್ರ್ಯ ಹೋರಾಟಗಾರರ ಗುರುತಿನ ಚೀಟಿ |
| ಇ) ಆಯುಧ ಲೈಸನ್ಸ್ |
| ಎಫ್) ಆಸ್ತಿ ದಾಖಲೆಗಳು, ಪಹಣಿ, ಪಟ್ಟ, ನೋಂದಾಯಿಸಲ್ಪಟ್ಟ ದಾಖಲೆಗಳು |
| ಜಿ) ಪಡಿತರ ಚೀಟಿ |
| ಹೆಚ್) ಪಿಂಚಣಿ ದಾಖಲೆಗಳು-ಮಾಜಿ ಸೈನಿಕರ ಪಿಂಚಣಿ ಪುಸ್ತಕ/ಪಿಂಚಣಿ ಪೇಮೆಂಟ್ ಆರ್ಡರ್/ಮಾಜಿ ಸೈನಿಕರ ವಿಧವ ಅಥವಾ ಅವಲಂಬಿತ ಪ್ರಮಾಣಪತ್ರ, ವೃದ್ದ ಪಿಂಚಣಿ ಆರ್ಡರ್, ವಿಧವಾ ಪಿಂಚಣಿ ಆರ್ಡರ್ |
| ಐ) ರೈಲ್ವೆ ಸೇವಾ ಗುರುತಿನ ಪತ್ರ |
| ಜೆ) ಆದಾಯ ತೆರಿಗೆ ಗುರುತಿನ ಕಾರ್ಡ್ (ಪ್ಯಾನ್ ಕಾರ್ಡ್) |
| ಕೆ) ಬ್ಯಾಂಕ್/ಕಿಸಾನ್/ಅಂಚೆ ಕಛೇರಿ ಪಾಸ್ ಪುಸ್ತಕಗಳು |
| ಎಲ್) ಅಂಗೀಕೃತ ಶಿಕ್ಷಣ ಸಂಸ್ಥೆಗಳಿಂದ ವಿದ್ಯಾರ್ಥಿ ಗುರುತಿನ ಕಾರ್ಡ್‌ಗಳು |
| ಎಂ) ಚಾಲನಾ ಪರವಾನಿಗಿ ಪತ್ರ |
| ಎನ್) ಜನನ ಮರಣ ದಾಖಲಾತಿ ಕಾಯ್ದೆಯಡಿ ನೀಡಲ್ಪಡುವ ಜನನ ಪ್ರಮಾಣಪತ್ರಗಳು |
| ಓ) ಗ್ಯಾಸ್ ಕನೆಕ್ಷನ್ ಚೀಟಿಗಳು |
| (ಈ ಎಲ್ಲಾ ದಾಖಲೆಗಳ ಮೂಲ ಪ್ರತಿಯನ್ನು ಪರಿಶೀಲನೆಗಾಗಿ ಅರ್ಜಿಯೊಂದಿಗೆ ನೀಡಲೇಬೇಕು. ಮೂಲ ದಾಖಲೆಯ ಪ್ರತಿಯನ್ನು ಸ್ವಪ್ರಮಾಣಿಕರಿಸಬೇಕು) |
ತತ್ಕಾಲ್ ಶುಲ್ಕವನ್ನು ನಗದು ಅಥವಾ ಡಿಡಿ ಮೂಲಕ ಪಾವತಿಸಬಹುದು. ತತ್ಕಾಲ್ ಶುಲ್ಕ ವಿವರ ಕೆಳಕಂಡಂತಿದೆ. |
|
| ೧ | ಅರ್ಜಿ ಸಲ್ಲಿಕೆಯ ೧ ರಿಂದ ೭ ದಿನದಲ್ಲಿ ನೀಡಲು | ರೂ. ೧೫೦೦.೦೦+ ಪಾಸ್‌ಪೋರ್ಟ್ ಶುಲ್ಕ ರೂ. ೧೦೦೦.೦೦ |
| ೨ | ಅರ್ಜಿ ಸಲ್ಲಿಕೆಯ ೮ ರಿಂದ ೧೪ ದಿನದಲ್ಲಿ ನೀಡಲು | ರೂ. ೧೦೦೦.೦೦+ ಪಾಸ್‌ಪೋರ್ಟ್ ಶುಲ್ಕ ರೂ. ೧೦೦೦.೦೦ |
|
|
| ೧ | ಅರ್ಜಿ ಸಲ್ಲಿಕೆಯ ೧ ರಿಂದ ೭ ದಿನದಲ್ಲಿ ನೀಡಲು | ರೂ.೨೫೦೦.೦೦ + ಪಾಸ್‌ಪೋರ್ಟ್ ಶುಲ್ಕ ರೂ. ೨೫೦೦.೦೦ |
| ೨ | ಅರ್ಜಿ ಸಲ್ಲಿಕೆಯ ೮ ರಿಂದ ೧೪ ದಿನದಲ್ಲಿ ನೀಡಲು | ರೂ. ೧೫೦೦.೦೦+ ಪಾಸ್‌ಪೋರ್ಟ್ ಶುಲ್ಕ ರೂ. ೨೫೦೦.೦೦ |
|
|
| ೧ | ಅರ್ಜಿ ಸಲ್ಲಿಕೆಯ ಮೂರು ಕೆಲಸದ ದಿನದಲ್ಲಿ ನೀಡಲು | ರೂ.೧೫೦೦.೦೦ + ಪಾಸ್‌ಪೋರ್ಟ್ ಶುಲ್ಕ ರೂ. ೧೦೦೦.೦೦ |