ಹೋಂ ಪೇಜ್ ಸಂಪರ್ಕಿಸಿ ನಮ್ಮಬಗ್ಗೆ ಫೋಟೋ ಗ್ಯಾಲರಿ ಸೈಟ್ ನಕ್ಷೆ
 

 ಅರ್ಜಿ ನಮೂನೆಗಳು

 ಫಾರಂ ತುಂಬುವ ವಿಧಾನಗಳು

 ಪ್ರಮಾಣಪತ್ರಗಳು

 ಶುಲ್ಕ ವಿವರ

 ಅರ್ಜಿ ಸಲ್ಲಿಸುವ ವಿಧಾನ

 ತತ್ಕಾಲ್ ಸೇವೆ ಮಾಹಿತಿ

 ಆನ್‌ಲೈನ್ ದಾಖಲಾತಿ (ಸಾರ್ವಜನಿಕರಿಗೆ)

 ಆನ್‌ಲೈನ್ ದಾಖಲಾತಿ (ಏಜಂಟರಿಗೆ)

 ಪಾಸ್‌ಪೋರ್ಟ್ ಕಾಯ್ದೆ

 ತಪಶೀಲು ಪಟ್ಟಿ (ಚೆಕ್ ಲಿಸ್ಟ್)

 ದಂಡ ವಿವರ

 ಮಾಹಿತಿ ಹಕ್ಕು ಕಾಯ್ದೆ(ಎಲ್ಲಾ ಕಛೇರಿಗಳು)

ಬೆಂಗಳೂರು ಓನ್ ಕೇಂದ್ರಗಳು

ಬೆಂಗಳೂರಿನ ನಾಗರೀಕರ ಸೌಲಭ್ಯಕ್ಕೆಂದೇ ಸ್ಥಾಪಿತವಾಗಿರುವ ಬೆಂಗಳೂರು ಓನ್ ಕೇಂದ್ರಗಳಲ್ಲಿ ಪಾಸ್‌ಪೋರ್ಟ್ ಅರ್ಜಿಗಳನ್ನು ಸಲ್ಲಿಸಬಹುದು. ಪ್ರಸ್ತುತ ಬೆಂಗಳೂರಿನಲ್ಲಿ ೨೧ ಬೆಂಗಳೂರು ಓನ್ ಕೇಂದ್ರಗಳಿದ್ದು ಇವುಗಳ ವಿವರ ಕೆಳಕಂಡಂತಿದೆ.
AIRPORT ROAD

1st Floor, S7 - Sub Division
BESCOM Office, In front of Airport Arrival
Gate, Airport Road, Blr-17

Tel: 22955440 / 41
NAGARBHAVI

1st Floor, BDA Shopping Complex,
2nd Stage, 3rd Block, Nagarbhavi, Blr - 72

Tel: 22729324
BANASHANKHARI

1st Floor, BDA Shopping Complex,
2nd Stage, Banashankhari, Blr 70

Tel: 22955460 / 61


HBRLAYOUT

1st Floor, BDA Shopping Complex,
1st Stage, 2nd Block, HBR Layout,
Blr 84

Tel: 22955435 / 36
RT NAGAR

City Central Library, East Zone,
1st Main Road, RT Nagar, Blr - 32

Tel: 22955425 / 26
RAJAJINAGAR

1st Floor, BMP Complex, Next to RTO,
2nd Block, Rajajinagar, Bangalore.

Tel: 22955410 / 11

JP NAGAR

Ground Floor, S6 - Sub Division Office,
BESCOM Building, 14th Cross, 1st Phase, JP
Nagar, Blr 78

Tel: 22955455 / 56
TANNERY ROAD

E1 Sub Division, BESCOM Office Building,
9th Main, 3rd Stage, Pillana Garden,
Tannery Road, Blr 45

Tel: 22955430 / 31
JAYANAGAR

Bangalore Mahanagara Palike Complex,
9th Cross, 9th Main, 2nd Block, Jayanagar, Blr - 11

Tel: 22955450 / 51


MALLESHWARAM

BWSSB (Q&A) Office Compound,
Near Lakshmi Ammanni College,
18th Cross, Malleshwaram, Blr - 03

Tel: 22955415/16
SHANTINAGAR

First Floor, Divya Shree Chambers,
Shantinagar, Bangalore

Tel: 22955445 / 46
YESHWANTHAPURA

BMP Complex, RTO Building,
Triveni Road, Yeshwanthapura,
Blr 22

Tel: 22955420 / 21
KALASIPALYAM

1st Floor, BSNL Office Building,
A.M. Road, Kalasipalyam, Blr 02

Tel: 22955465 / 66



VIJAYANAGAR

Ground Flr, BDA Shopping Complex,
MRCR (Magadi Road Chord Road),
Blr 40

Tel: 22955405 / 06
SHRIRAMPURAM

Bashyam Circle
Behind Shrirampua P.S.
Blr 21

Tel.: 22955475

INDIRANAGAR

44 and 14, Ground Floor,
BDA Shopping Complex, Blr 38

Tel: 22955483


KORMANGALA

No.1, Ground Floor, KHB Shopping
Near Syndicate Bank
National Games Village

Tel: 22955481
MS BUILDING

Government Secretariat

Tel.: 22955485




ಬೆಂಗಳೂರು ಓನ್ ಕೇಂದ್ರಗಳಲ್ಲಿ ಹೊಸ ಪಾಸ್‌ಪೋರ್ಟ್‌ಗಾಗಿ ಮತ್ತು ಪುನರ್‌ನೀಡಿಕೆ/ನವೀಕರಣಕ್ಕಾಗಿ ಅರ್ಜಿ ಸಲ್ಲಿಸಬಹುದು. ಈ ಕೇಂದ್ರಗಳು ಬೆಂಗಳೂರು ನಗರದ ವಿವಿಧ ಸ್ಥಳಗಳಲ್ಲಿದ್ದು, ಅರ್ಜಿದಾರರು ತಮ್ಮ ವಾಸದ ಸ್ಥಳದ ಸಮೀಪದ ಬೆಂಗಳೂರು ಓನ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು. ಈ ಮೂಲಕ ಅರ್ಜಿದಾರರು ಶ್ರಮಪಟ್ಟು ಪಾಸ್‌ಪೋರ್ಟ್ ಕಛೇರಿಗೆ ಬಂದು ಅರ್ಜಿ ಸಲ್ಲಿಸುವ ಅನಿವಾರ್ಯತೆ ಇರುವುದಿಲ್ಲ. ಬೆಂಗಳೂರಿನ ಪಾಸ್‌ಪೋರ್ಟ್ ಅರ್ಜಿದಾರರು ಬೆಂಗಳೂರು ಓನ್ ಕೇಂದ್ರಗಳ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕಾಗಿ ವಿನಂತಿ.

ಬೆಂಗಳೂರು ಓನ್ ಕೇಂದ್ರದಲ್ಲಿ ಅರ್ಜಿ ಸಲ್ಲಿಸುವುದರಿಂದ ಪಾಸ್‌ಪೋರ್ಟ್ ದೊರೆಯುವಲ್ಲಿ ವಿಳಂಬವಾಗುವುದೇ?
ಇಲ್ಲ. ಎಲ್ಲಾ ಅರ್ಜಿಗಳನ್ನು ಬೆಂಗಳೂರು ಓನ್ ಕೇಂದ್ರಗಳಿಂದ ಪಾಸ್‌ಪೋರ್ಟ್ ಕಛೇರಿಗೆ ಅರ್ಜಿ ಸಲ್ಲಿಕೆಯ ನಂತರದ ದಿನದಂದು ತಲುಪಿಸಲಾಗುತ್ತದೆ. ಅರ್ಜಿ ತೆಗೆದುಕೊಳ್ಳುವ ಬೆಂಗಳೂರು ಓನ್ ಕೇಂದ್ರವು ಗಣಕೀಕೃತ ಫೈಲ್ ಸಂಖ್ಯೆಯನ್ನು ಪಾಸ್‌ಪೋರ್ಟ್ ಕಛೇರಿಗೆ ವಿದ್ಯುನ್ಮಾನ ವ್ಯವಸ್ಥೆ ಬಳಸಿ ವರ್ಗಾಯಿಸುತ್ತದೆ. ಜೊತೆಗೆ ಬೆಂಗಳೂರು ಓನ್ ಕೇಂದ್ರವು ಅರ್ಜಿದಾರರ ವೈಯುಕ್ತಿಕ ವಿವರ, ಭಾವಚಿತ್ರ ಮತ್ತು ಸಹಿಗಳನ್ನು ಸಹ ವಿದ್ಯುನ್ಮಾನ ವ್ಯವಸ್ಥೆ ಬಳಸಿ ಅರ್ಜಿ ಸಲ್ಲಿಸಿದ ದಿನದಂದೇ ವರ್ಗಾಯಿಸುತ್ತದೆ. ಪೋಲೀಸ್ ವಿಚಾರಣೆಗೆ ಸಂಬಂಧಪಟ್ಟ ವೈಯುಕ್ತಿಕ ವಿವರ ನಮೂನೆಯನ್ನು ಬೆಂಗಳೂರು ಪೋಲೀಸ್ ಆಯುಕ್ತರ ಕಛೇರಿಗೆ ನೇರವಾಗಿ ಕಳುಹಿಸಲಾಗುತ್ತದೆ. ಹೀಗಾಗಿ ಅರ್ಜಿಯ ಸಂಸ್ಕರಣೆಯಲ್ಲಿ ಯಾವುದೇ ರೀತಿಯ ವಿಳಂಬವಾಗುವುದಿಲ್ಲ. ಪಾಸ್‌ಪೋರ್ಟ್ ಕಛೇರಿ ಮತ್ತು ಕರ್ನಾಟಕ ಸರ್ಕಾರದ ಈ-ಆಡಳಿತ ಪ್ರಭುತ್ವದೊಂದಿಗೆ ಅರ್ಜಿಗಳ ಸಂಸ್ಕರಣೆ ಸಮಯದ ಬಗ್ಗೆ ತಿಳುವಳಿಕೆ ಒಪ್ಪಂದವಿದೆ.

ಬೆಂಗಳೂರು ಓನ್ ಕೇಂದ್ರದಲ್ಲಿ ಅರ್ಜಿ ಸಲ್ಲಿಸಲು ಹೆಚ್ಚುವರಿ ಶುಲ್ಕವನ್ನು ನೀಡಬೇಕೆ?
ಇಲ್ಲ. ಅರ್ಜಿದಾರರು ನಿಗಧಿತ ಶುಲ್ಕವನ್ನು ಪಾವತಿಸಬೇಕಿದ್ದು, ಈ ವಿವರ ನಮ್ಮ ಶುಲ್ಕ ವಿವರ ವಿಭಾಗದಲ್ಲಿದೆ.

ಶುಲ್ಕವನ್ನು ಯಾವ ಬಗೆಯಲ್ಲಿ ನಾವು ಪಾವತಿಸಬಹುದು?
ಬೆಂಗಳೂರು ಓನ್ ಕೇಂದ್ರಗಳಲ್ಲಿ ನಗದು ಅಥವಾ ಕ್ರೆಡಿಕ್ ಕಾರ್ಡ್ ಬಳಸಿ ಶುಲ್ಕವನ್ನು ಪಾವತಿಸಬಹುದು.

ಬೆಂಗಳೂರು ಓನ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸುವಾಗ ಮೂಲ ದಾಖಲೆಗಳನ್ನು ಪರಿಶೀಲನೆಗೆ ನೀಡಬೇಕೆ? ದಾಖಲೆ ಪ್ರತಿಯ ಪ್ರಮಾಣೀಕರಣ ಮಾಡಲು ಅರ್ಹರಾಗಿರುವ ಅಧಿಕೃತ ಅಧಿಕಾರಿಗಳು ಯಾರು?
ಮೂಲ ದಾಖಲೆಗಳ ಎರಡು ಪ್ರತಿಯನ್ನು ಪತ್ರಾಂಕಿತ ಅಧಿಕಾರಿಗಳಲ್ಲಿ ಪ್ರಮಾಣೀಕರಿಸಿ ನೀಡಬೇಕಿರುವುದು ಅಗತ್ಯವಾಗಿರುತ್ತದೆ. ಮೂಲ ದಾಖಲೆಗಳನ್ನು ಪರಿಶೀಲನೆಗೆ ನೀಡಬೇಕಿದ್ದು, ಪರಿಶೀಲನೆಯ ನಂತರ ಇವುಗಳನ್ನು ಹಿಂತಿರುಗಿಸಲಾಗುವುದು. ಪುನರ್ ನೀಡಿಕೆಯ ಸನ್ನಿವೇಶದಲ್ಲಿ ಹಳೇ ಪಾಸ್‌ಪೋರ್ಟ್ (ಅನೂರ್ಜಿತ
ವೀಸಾ ಹೊಂದಿದ್ದಲ್ಲಿ ಮಾತ್ರ) ಅನ್ನು ಸಹ ಅರ್ಜಿಯೊಂದಿಗೆ ಸಲ್ಲಿಸಬೇಕಾಗಿರುತ್ತದೆ. ಬೆಂಗಳೂರು ಓನ್ ಕೇಂದ್ರಗಳಲ್ಲಿ ಸಲ್ಲಿಸಲಾಗುವ ಅರ್ಜಿ ಮತ್ತು ದಾಖಲೆಗಳ ಒಂದು ಪ್ರತಿಯನ್ನು ಅರ್ಜಿದಾರರು ತಮ್ಮ ಬಳಿ ಇಟ್ಟುಕೊಳ್ಳಬೇಕಾಗಿ ವಿನಂತಿ.

ತತ್ಕಾಲ್ ವ್ಯವಸ್ಥೆ ಬೆಂಗಳೂರು ಓನ್ ಕೇಂದ್ರಗಳಲ್ಲಿ ಲಭ್ಯವಿದೆಯೇ?
ಇಲ್ಲ. ಆದರೆ ಅರ್ಜಿದಾರರು ತಮ್ಮ ಅರ್ಜಿ ಸಲ್ಲಿಕೆಯ ನಂತರ ಪಾಸ್‌ಪೋರ್ಟ್ ಕಛೇರಿಗೆ ಬಂದು ಅಗತ್ಯದ ತತ್ಕಾಲ್ ಸಂಬಂಧಿತ ದಾಖಲೆ ಮತ್ತು ಶುಲ್ಕ ಭರಿಸಿ ತತ್ಕಾಲ್‌ಗೆ ಪರಿವರ್ತಿತಗೊಳಿಸಿಕೊಳ್ಳಬಹುದು.

ಬೆಂಗಳೂರು ಓನ್ ಕೇಂದ್ರಗಳಲ್ಲಿ ಅವಧಿ ಮೀರಿದ/ಮೀರುತ್ತಿರುವ ಪಾಸ್‌ಪೋರ್ಟ್‌ಗಳ ಪುನರ್ ನೀಡಿಕೆಗೆ ಅರ್ಜಿ ಸಲ್ಲಿಸಬಹುದೇ?
ಹೌದು. ಆದರೆ ಊರ್ಜಿತ ವೀಸಾ ಹೊಂದಿರುವ ಪಾಸ್‌ಪೋರ್ಟ್‌ಗಳ ಪುನರ್ ನೀಡಿಕೆ ಅರ್ಜಿ ಮತ್ತು ದತ್ತಕ ಮಕ್ಕಳ ಅರ್ಜಿಯನ್ನು ಸ್ವೀಕರಿಸಲಾಗುವುದಿಲ್ಲ. ಇತರೆ ಸೇವೆಗಳ ಅರ್ಜಿಗಳನ್ನು ಬೆಂಗಳೂರಿನ ಪಾಸ್‌ಪೋರ್ಟ್ ಕಛೇರಿಯಲ್ಲಿ ಮಾತ್ರ ಸಲ್ಲಿಸಬಹುದು.

ಅವಯಸ್ಕ ಮಕ್ಕಳ ಅರ್ಜಿಯನ್ನು ಬೆಂಗಳೂರು ಓನ್ ಕೇಂದ್ರಗಳಲ್ಲಿ ಸಲ್ಲಿಸಬಹುದೇ?
ಹೌದು. ಅವಯಸ್ಕ ಮಕ್ಕಳ ಅರ್ಜಿಯನ್ನು ಅವರ ತಂದೆ/ತಾಯಿ ಅಥವಾ ಪೋಷಕರು ಖುದ್ದು ಹಾಜರಿದ್ದು ಅರ್ಜಿಯನ್ನು ಸಲ್ಲಿಸಬಹುದು.

ನಾನು ಇತ್ತೀಚೆಗೆ ಬೆಂಗಳೂರು ಓನ್ ಕೇಂದ್ರಕ್ಕೆ ನನ್ನ ಅರ್ಜಿಯನ್ನು ಸಲ್ಲಿಸಲು ಹೋಗಿದ್ದೆ. ಬೆಂಗಳೂರು ಓನ್ ಕೇಂದ್ರದವರು ನನ್ನ ಅರ್ಜಿಯನ್ನು ಸಂಕೀರ್ಣವೆಂದು ತೆಗೆದುಕೊಳ್ಳಲಿಲ್ಲ ಹಾಗೂ ಪಾಸ್‌ಪೋರ್ಟ್ ಕಛೇರಿಗೆ ಹೋಗಿ ಸಲ್ಲಿಸಲು ಸಲಹೆ ಮಾಡಿದರು.
ಈ ಸನ್ನಿವೇಶದಲ್ಲಿ ನಾನು ಏನು ಮಾಡಬೇಕು?
ಕೆಲವೊಂದು ಸನ್ನಿವೇಶಗಳಲ್ಲಿ ಅರ್ಜಿಯೊಂದಿಗೆ ನೀಡಲಾಗುವ ದಾಖಲೆಗಳಲ್ಲಿ ಸಂಕೀರ್ಣತೆ ಇರುತ್ತದೆ. ಈ ಬಗೆಯ ಸನ್ನಿವೇಶಗಳಲ್ಲಿ ಬೆಂಗಳೂರು ಓನ್ ಕೇಂದ್ರಗಳು ಅರ್ಜಿದಾರರಿಗೆ ನೇರವಾಗಿ ಪಾಸ್‌ಪೋರ್ಟ್ ಕಛೇರಿಯಲ್ಲಿ ಅರ್ಜಿ ಸಲ್ಲಿಸಲು ಸಲಹೆ ಮಾಡುವರು. ಪಾಸ್‌ಪೋರ್ಟ್ ಅರ್ಜಿಯ ಮೇಲೆ ಸಂಕೀರ್ಣ ಪ್ರಕರಣ(Complicated Case) ಎಂದು ಮುದ್ರೆ ಹಾಕುವರು. ಈ ಬಗೆಯ ಅರ್ಜಿದಾರರು ಬೆಂಗಳೂರು ಪಾಸ್‌ಪೋರ್ಟ್ ಕಛೇರಿಗೆ ಬಂದು ತಮ್ಮ ಅರ್ಜಿಯನ್ನು ಸಲ್ಲಿಸಬಹುದು.

ನಾನು ಬೆಂಗಳೂರು ಓನ್ ಕೇಂದ್ರದಲ್ಲಿ ಅರ್ಜಿ ಸಲ್ಲಿಸಿದ ನಂತರ ಅರ್ಜಿಯ ಸಂಸ್ಕರಣೆ ಪಾಸ್‌ಪೋರ್ಟ್ ಕಛೇರಿಯ ಆಕ್ಷೇಪಣೆಗಳ ಕಾರಣದಿಂದ ನಿಧಾನವಾಗಬಹುದೇ?
ಇಲ್ಲ. ಪಾಸ್‌ಪೋರ್ಟ್ ಕಛೇರಿಗೆ ಬಂದ ನಂತರ ಅರ್ಜಿಯ ಸಂಸ್ಕರಣೆ ಇತರೆ ಅರ್ಜಿಗಳಂತೆಯೇ ಶೀಘ್ರವಾಗಿ ಆಗುವುದು. ಬೆಂಗಳೂರು ಓನ್ ಕೇಂದ್ರದ ಸಿಬ್ಬಂದಿಗೆ ಪಾಸ್‌ಪೋರ್ಟ್ ಅರ್ಜಿ ಮತ್ತು ದಾಖಲೆಗಳ ಪರಿಶೀಲನೆ ಬಗ್ಗೆ ಸಮರ್ಪಕ ಹಾಗೂ ನಿಯಮಿತ ತರಬೇತಿ ನೀಡಲಾಗಿರುತ್ತದೆ. ಹಾಗಾಗಿ ಪಾಸ್‌ಪೋರ್ಟ್ ಕಛೇರಿಯಿಂದ ಆಕ್ಷೇಪಣೆ ಉದ್ಬವಿಕೆಯ ಸಾಧ್ಯತೆ ತೀರಾ ಕಡಿಮೆ ಇರುತ್ತದೆ. ಒಂದು ವೇಳೆ ಹಾಗೇನಾದರೂ ಆಕ್ಷೇಪಣೆ ಉದ್ಬವಿಸಿದ್ದಲ್ಲಿ ಪಾಸ್‌ಪೋರ್ಟ್ ಕಛೇರಿಯು ಅರ್ಜಿದಾರರಿಗೆ ತಕ್ಷಣವೇ ಮಾಹಿತಿ ನೀಡುತ್ತದೆ.
ಬೆಂಗಳೂರು ಓನ್ ಕೇಂದ್ರದಲ್ಲಿ ಅರ್ಜಿ ಸಲ್ಲಿಸಿದ ನಂತರ ನನ್ನ ಅರ್ಜಿಯ ಪ್ರಸ್ತುತ ಸ್ಥಿತಿಯನ್ನು ತಿಳಿಯುವ ಬಗೆ ಹೇಗೆ?
ಅರ್ಜಿದಾರರು ಪಾಸ್‌ಪೋರ್ಟ್ ಕಛೇರಿಯ ವೆಬ್‌ಸೈಟ್‌ನಲ್ಲಿ ತಮ್ಮ ಫೈಲ್ ಸಂಖ್ಯೆ ಮತ್ತು ಜನ್ಮದಿನಾಂಕ ನಮೂದಿಸಿ, ಅರ್ಜಿಯ ಪ್ರಸ್ತುತ ಸ್ಥಿತಿ ತಿಳಿಯಬಹುದು. ಇದಕ್ಕೆ ಸಂಬಂಧಪಟ್ಟ ವೆಬ್‌ಸೈಟ್ ಕುಣಿಕೆ ಹೀಗಿದೆ.
http://nitpu2.kar.nic.in/passport/npassport.asp

 ಪೀಠಿಕೆ

 ಕಛೇರಿ ವಿಳಾಸ

 ಕಛೇರಿ ಸಮಯ

 ರಜಾದಿನಗಳು

 ಕಾರ್ಯ ವ್ಯಾಪ್ತಿ

 ಕೌಂಟರ್ ವಿವರ

 ದೂರುಗಳು

 ಅರ್ಜಿಯ ಪ್ರಸ್ತುತ ಸ್ಥಿತಿ

 ಟೆಲಿ ವಿಚಾರಣೆ

 ವಿಲೇವಾರಿಯಾಗಿರುವ ಅರ್ಜಿಗಳು

 ನಿಮ್ಮ ಪೈಲ್ ಸಂಖ್ಯೆ-ಪತ್ತೆ ಮಾಡಿ

 ಅದಾಲತ್

 ಮಾಹಿತಿ ಹಕ್ಕು ಕಾಯ್ದೆ ಬೆಂಗಳೂರು

 ಬೆಂಗಳೂರು
ಓನ್ ಕೇಂದ್ರಗಳು

 ಶೀಘ್ರ ಅಂಚೆ
ಕೇಂದ್ರಗಳು

 ಜಿಲ್ಲಾವಾರು ಪಾಸ್‌ಪೋರ್ಟ್ ಘಟಕಗಳು

 ಮಾನ್ಯತೆ ಹೊಂದಿದ ಟ್ರಾವೆಲ್ ಏಜಂಟ್‌ಗಳು

 ಆವರ್ತಕ ಪ್ರಶ್ನೆಗಳು

Copyright 2008, Regional Passport Office This site is best viewed in 1024 x 768 resolution Hosted by National Informatics Center.